ಪಾವಗಡದಲ್ಲಿ ನಕಲಿ ವೈದ್ಯರ `ಅಂಗಡಿ ಎತ್ತಂಗಡಿ’..

ಪಾವಗಡ : ಈಗಾಗಲೇ ಕೊರೊನಾದಿಂದ ಕಂಗೆಟ್ಟಿರುವ ಜನರು ಸ್ವಲ್ಪ ಹುಷಾರಿಲ್ಲದಿದ್ರೂ ಮೊದಲು ಹೋಗೋದು ವೈದ್ಯರ ಹತ್ತಿರ.ಆದರೆ ಅದೇ ವೈದ್ಯರೇ ನಕಲಿ ಆದರೇ ಏನಾಗಬೇಕು ಜನರ ಪರಿಸ್ಥಿತಿ..
ಹೌದು,ಪಾವಗಡ ತಾಲೂಕಿನಲ್ಲೂ ಆಗಿರೋದು ಕೂಡ ಇದೆ. ಈ ತಾಲೂಕಿನ ವೈ.ಎನ್.ಹೊಸಕೋಟೆಯಲ್ಲಿ ಅನಧಿಕೃತವಾಗಿ ತೆರಲಾಗಿದ್ದ ನಕಲಿ ವೈದ್ಯರ ಎರಡು ಅನಧಿಕೃತ ಕ್ಲಿನಿಕ್‌ಗಳಿಗೆ ಬೀಗ ಜಡಿಯಲಾಗಿದೆ.
ಅಂದ ಹಾಗೇ ನಕಲಿ ವೈದ್ಯರ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಉಪ ವಿಭಾಗಾಧಿಕಾರಿ ಡಾ.ನಂದಿನಿ ದೇವಿ ಬುಡ್ಡಾರೆಡ್ಡಿಹಳ್ಳಿಯ ವೆಂಕಟೇಶ್ ಮತ್ತು ಅನಂತಪುರದ ಗೋಪಾಲನಾಯ್ಕ ಎಂಬಿಬ್ಬರು ತೆರದಿದ್ದ ಅನಧಿಕೃತ ಕ್ಲಿನಿಕ್‌ವುಳ್ಳ ಲ್ಯಾಬ್ ಟೆಕ್ನೀಷಿಯನ್ ಕೇಂದ್ರಗಳಿಗೆ ಬೀಗ ಹಾಕಿಸಿದ್ದಾರೆ.
ವಿಪರ್ಯಾಸವೆಂದ್ರೆ ಇಂತಹ ಕೇಂದ್ರಗಳನ್ನ ತೆಗೆದ ಇವರಿಬ್ಬರು, ರಕ್ತ, ಕಫ, ಮೂತ್ರ ಇತ್ಯಾದಿ ಪರೀಕ್ಷೆಯ ಜೊತೆಗೆ ಅನಧಿಕೃತವಾಗಿ ಚುಚ್ಚುಮದ್ಧು, ಮಾತ್ರೆಗಳನ್ನು ನೀಡುವುದು, ಗ್ಲೂಕೋಸ್ ಜೊತೆಗೆ ರಕ್ತ ನೀಡುವ ಕೆಲಸಕ್ಕೂ ಕೈ ಹಾಕಿದ್ದರು.ಇದಕ್ಕಾಗಿ ರೋಗಿಗಳಿಂದ ಸಾವಿರಾರು ರೂಪಾಯಿಗಳನ್ನು ಪಡೆಯುತ್ತಿದ್ದರು.
ಹೀಗಾಗಿ ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಇಂತಹ `ನಕಲಿ ಅಂಗಡಿ’ಗಳಿಗೆ ಬೀಗಮುದ್ರೆ ಹಾಕಲಾಗಿದ್ದು,ಇವರಿಬ್ಬರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ವೈದ್ಯಾಧಿಕಾರಿ ತಿರುಪತಯ್ಯ ತಿಳಿಸಿದ್ದಾರೆ.

ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ (ತುಮಕೂರು)

Please follow and like us:

Related posts

Leave a Comment