ಅಕಾಲಿಕ ಮಳೆ,ಗಾಳಿಗೆ ಭತ್ತ ನಾಶ, ರೈತರು ಕಂಗಾಲು

ಸಿರಿವಾರ : ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಬಲ್ಲಟಗಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇತ್ತೀಚಿಗೆ ಸುರಿದ ಅಕಾಲಿಕ ಮಳೆ ಮತ್ತು ರಭಸವಾದ ಗಾಳಿಗೆ ಭತ್ತ ತುತ್ತಾಗಿ ನೆಲದ ಪಾಲಾಗಿ ನಾಶವಾಗಿದೆ.
ರೈತರು ಸುಮಾರು ನಾಲ್ಕು ತಿಂಗಳಿAದ ಜೋಪಾನ ಮಾಡಿ ಬೆಳೆಸಿದ ಭತ್ತದ ಬೆಳೆ ಕೈಗೆ ಸೇರುವ ಮೊದಲೇ ನಾಶವಾಗಿದ್ದು,ಈ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಇನ್ನು ರೈತರು ಒಂದು ಕಡೆ ಲಾಕ್‌ಡೌನ್, ಮತ್ತೊಂದು ಕಡೆ ಬೆಳೆದ ಭತ್ತದ ಬೆಳೆ ನಾಶವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದೇ ವೇಳೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವುದೋ ಇಲ್ಲವೋ ಎಂಬ ಆತಂಕದಲ್ಲಿರುವ ರೈತರು ಕೂಡಲೇ ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರಿವಾರ (ರಾಯಚೂರು)

Please follow and like us:

Related posts

Leave a Comment