ರಸ್ತೆ ಅಪಘಾತದಲ್ಲಿ ಗ್ರಾ.ಪಂ. ಬಿಲ್ ಕಲೆಕ್ಟರ್ ಸಾವು..

ತಿಪಟೂರು: ಬೈಕ್ ಹಾಗೂ ಮಾರುತಿ ಕಾರು ನಡುವೆ ಅಪಘಾತ ಸಂಭವಿಸಿ ಬಿಲ್ ಕಲೆಕ್ಟರ್‌ರೊಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ತಿಪಟೂರು ತಾಲ್ಲೂಕಿನ ಗಂಗನಘಟ್ಟ ಬಳಿ ನಡೆದಿದೆ.
ದಯಾನಂದ್(೩೫) ಸಾವು ಕಂಡ ಬಿಲ್ ಕಲೆಕ್ಟರ್ ಆಗಿದ್ದು, ಮತ್ತಿಘಟ್ಟ ಗ್ರಾಮದ ವಾಸಿಯಾಗಿದ್ದಾರೆ.
ಸದ್ಯ ತಿಪಟೂರು _ ಚನ್ನರಾಯಪಟ್ಟಣ್ಣ ರಸ್ತೆ ಗಂಗನಘಟ್ಟ ವಡಗಲ್ಲು ರಂಗನಾಥಸ್ವಾಮಿ ದೇವಾಲಯದ ಮುಂಭಾಗ ದಯಾನಂದ್ ಬರುತ್ತಿದ್ದ ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದೆ.ಈ ವೇಳೆ ದಯಾನಂದ್ ಸ್ಥಳದಲ್ಲೇ ಸಾವು ಕಂಡರೇ, ಗ್ರಾಮ ಪಂಚಾಯಿತಿ ನೀರು ವಿತರಕ ರಾಮಯ್ಯ(೪೫) ತೀವ್ರವಾಗಿ ಗಾಯಗೊಂಡಿದ್ದು ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿದ್ದೇಶ್ವರ್ ಎಕ್ಸ್ ಪ್ರೆಸ್ ಟಿವಿ ತಿಪಟೂರು (ತುಮಕೂರು)

Please follow and like us:

Related posts

Leave a Comment