ಪೌರ ಕಾರ್ಮಿಕರ ಬಗ್ಗೆ ಬಿಬಿಎಂಪಿ ನಿರ್ಲಕ್ಷö್ಯ?,ನೆರವಿಗೆ ಧಾವಿಸಿದ ಶಾಸಕ..

ಮಹದೇವಪುರ: ಸಾವಿರಾರು ಗಿಡಗಳನ್ನು ಮಕ್ಕಳಂತೆ ಸಾಕಿ ನಗರಾದ್ಯಾಂತ ಸಸಿಗಳನ್ನು ನೀಡುವಂತ ಬಿಬಿಎಂಪಿ ಅರಣ್ಯ ಘಟಕದ ಕಾರ್ಮಿಕರಿಗೆ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಅವರ ಬೆಂಬಲಿಗರು ಕೆಂಪಾಪುರದ ಸಸ್ಯಕ್ಷೇತ್ರಕ್ಕೆ ಆಗಮಿಸಿ ಸುಮಾರು ಕುಟುಂಬಗಳಿಗೆ ದಿನಸಿ ವಿತರಣೆ ಮಾಡಿದರು.
ಮಹದೇವಪುರ ಕ್ಷೇತ್ರದ ಕೆಂಪಾಪುರದ ಬಿಬಿಎಂಪಿ ಅರಣ್ಯ ಘಟಕ ಸಸ್ಯಕ್ಷೇತ್ರದ ಪೌರ ಕಾರ್ಮಿಕರಿಗೆ ದಿನಸಿಗಳನ್ನು ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಎರಡನೇ ಅಂತನಾಗಿ ೧೪ ಸಾವಿರ ಕೂಲಿ ಕಾರ್ಮಿಕರಿಗೆ,ಪೌರ ಕಾರ್ಮಿಕರಿಗೆ ದಿನಸಿ ವಿತರಣೆ ಮಾಡುವ ಯೋಜನೆಯಡಿಯಲ್ಲಿ ಇಂದು ಇಲ್ಲಿನ ಬಡಕುಟುಂಬಗಳಿಗೆ ಅಗತ್ಯ ದಿನಸಿಗಳನ್ನು ನೀಡಿದರು.
ಇನ್ನು ಕಾರ್ಮಿಕರೊಬ್ಬರು ಮಾತನಾಡಿ.ಇಲ್ಲಿಯವರೆಗೆ ಯಾವ ಒಬ್ಬ ವ್ಯಕ್ತಿಯಾಗಲ್ಲಿ ಅಧಿಕಾರಿಗಳಾಗಲಿ ಯಾರು ನಮ್ಮ ಬಗ್ಗೆ ಚಿಂತನೆ ಮಾಡಿಲ್ಲ,ಆದರೆ ದಿನಸಿ ವಿತರಣೆ ಮಾಡಿದ ಶಾಸಕ ಲಿಂಬಾವಳಿ ಹಾಗೂ ಅವರ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಬಿಜೆಪಿ ಮುಖಂಡರಾದ ಯಮಲೂರು ಲೋಕೇಶ್,ಶ್ರೀನಿವಾಸ್.ವಿ, ಸುಧೀರ್, ಪ್ರದೀಪ್, ಭಾಸ್ಕರ್, ಸೋಮ್ ಶೇಖರ್ ರೆಡ್ಡಿ, ಲೋಕೇಶ್, ರಮೇಶ್, ಸುರೇಶ್, ಆರುಮುಖಾಮ್ ಮುಂತಾದವರು ಇದ್ದರು.

ಕೆ.ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ(ಬೆAಗಳೂರು)

Please follow and like us:

Related posts

Leave a Comment