ಕೊರೊನಾ ಟೈಂನಲ್ಲೂ ಕೊಪ್ಪಳದಲ್ಲಿ ಕಾಂಗ್ರೆಸ್-ಬಿಜೆಪಿಯ ರಾಜಕೀಯ ಗುದ್ದಾಟ..

ಕೊಪ್ಪಳ : ರೋಮ್ ಹತ್ತಿ ಉರಿಯುವಾಗ ನಿರೋ ರಾಜ ಪೀಟಿಲು ಭಾರಿಸುತ್ತಿದ್ದನಂತೆ.. ಸದ್ಯ ಹೀಗಾಗಿದೆ ಕೊಪ್ಪಳ ಜಿಲ್ಲೆಯ ರಾಜಕಾರಣ..
ಕೊರೊನಾ ಬಂದ ಸಮಯದಲ್ಲಿ ಅದರಿಂದ ಜಿಲ್ಲೆಯನ್ನು ರಕ್ಷಿಸಿಕೊಳ್ಳಬೇಕಾದ ಈ ಜಿಲ್ಲೆಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಅಂದ ಹಾಗೇ ಕೊಪ್ಪಳದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಸಚಿವರು ಭೇಟಿ ನೀಡಿ ಬೆಳೆಹಾನಿ ಪರಿಶೀಲನೆ ಮಾಡಿದ್ದರ ಬಗ್ಗೆ ಕಾಂಗ್ರೆಸ್ ಮುಖಂಡರಾದ ತಂಗಡಗಿ, ರಾಯರೆಡ್ಡಿ ಮಾಡಿದ್ದ ಟೀಕೆಗೆ ತೀರುಗೇಟು ನೀಡಿದ್ದಾರೆ.
ಇನ್ನು ಢೋಂಗಿ ರಾಜಕಾರಣ ಮಾಡುವವರು ಕಾಂಗ್ರೆಸ್‌ನವರು, ಮೋದಿಯವರು ಮೌಢ್ಯವನ್ನು ಬಿತ್ತುತ್ತಿದ್ದಾರೆ ಅಂತ ರಾಯರೆಡ್ಡಿ ಹೇಳಿದ್ದಾರೆ.ಆದರೆ ಮೊನ್ನೆ ತಾನೇ ಬೆಂಗಳೂರಿನಿAದ ಬಂದಿರೋ ಇದೇ ರಾಯರೆಡ್ಡಿ ಜನರಲ್ಲಿ ಪೂಜೆಯ ನೆಪದಲ್ಲಿ ಮೌಢ್ಯವನ್ನ ಬಿತ್ತೋದು ಮಾಧ್ಯಮಗಳಲ್ಲಿ ಬಂದಿದೆ.ಹೀಗಾಗಿ ಜನಪರ ಕಾಳಜಿ ಇಲ್ಲದ ರಾಯರೆಡ್ಡಿ, ತಂಗಡಗಿ ಬಿಜೆಪಿ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಬಳಿಕ ಸಂಸದ ಕರಡಿ ಸಂಗಣ್ಣ ಮಾತನಾಡಿ, ಬೆಳೆಹಾನಿ ಪರಿಹಾರಕ್ಕೆ ಸಂಬAಧಿಸಿದAತೆ ತಂಗಡಗಿಯವರು ರಾಜಕಾರಣ ಬೆರೆಸುವ ಕೆಲಸ ಮಾಡುತ್ತಿದ್ದಾರೆ. ಸರಕಾರ ಸದ್ಯದ ಪರಿಸ್ಥಿತಿಯಲ್ಲಿ, ತನ್ನ ಇತಿಮಿತಿ ನಡುವೆ ಪರಿಹಾರ ನೀಡಲು ಮುಂದಾಗಿದೆ.ಆದರೆ ಇವರು ಮಾತ್ರ ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತಾರೆ,ಕಾಂಗ್ರೆಸ್ ನಾಯಕರಲ್ಲೇ ಇಬ್ಬಗೆ ನೀತಿ ಇದೆ,ಒಗ್ಗಟ್ಟಿಲ್ಲ ಎಂದು ದೂರಿದರು.
ಅಲ್ಲದೆ,ಕಾನೂನು ಮೀರಿ ನಡೆದುಕೊಂಡರೆ ಪಕ್ಷದವರಿದ್ದರೂ ಬೆಂಬಲಿಸಲ್ಲ.ಸದ್ಯ ಬಿಜೆಪಿ ಮುಖಂಡ ಗುರುಬಸವರಾಜ ಹೊಳಗುಂದಿ ವಿರುದ್ದ ಜಿಲ್ಲಾಧ್ಯಕ್ಷರು ಕ್ರಮ ತಗೋಳ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇನ್ನು ಕನಕಗಿರಿ ಶಾಸಕ ಬಸವರಾಜ ದಡೆಸೂಗುರು ಮಾತನಾಡಿ, ಮಾಜಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ ಮಾತಾಡಿ ಪ್ರಚಾರ ತಗೊಳ್ಳೊ ಕೆಟಗರಿಯವನು ಅಂವಾ, ಆತನಿಗೆ ಮಾಡಲು ಏನೂ ಕೆಲಸ ಇಲ್ಲ, ಅದಕ್ಕೆ ಬರೀ ಬಿಜೆಪಿಯವರ ವಿರುದ್ಧ ಹೇಳಿಕೆ ನೀಡೋದನ್ನೇ ಕೆಲಸ ಮಾಡ್ಕೊಂಡಿದಾನೆ. ಆತನ ಬಗ್ಗೆ ಮಾತಾಡೋದೇ ಟೈಮ್ ವೇಸ್ಟ್ ಅಂತ ವ್ಯಂಗ್ಯವಾಡಿದರು.

ನಾಭೀರಾಜ್ ದಸ್ತೇನವರ್ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ

Please follow and like us:

Related posts

Leave a Comment