ಹುಣುಸೂರಿನ ಬಿಳಿಕೆರೆಯಲ್ಲಿ ರೋಡ್‌ನಲ್ಲೇ ಬಿಡಿ ಸೇದ್ತಾರೆ..ಸಿಕ್ಕ ಸಿಕ್ಕಲ್ಲೇ ಹರಟೆ ಹೊಡಿತಾರೆ..

ಹುಣಸೂರು(ಮೈಸೂರು):ಅರಮನೆ ನಗರಿ ಮೈಸೂರು ಜಿಲ್ಲೆಯಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು,ಆತಂಕದ ವಾತಾವರಣ ಸೃಷ್ಟಿಯಾಗಿದೆ.ಆದರೆ ಇಷ್ಟಾದ್ರೂ ಜಿಲ್ಲೆಯಲ್ಲಿ ಲಾಕ್‌ಡೌನ್ ಮಾತ್ರ ಪಾಲಿಸಲು ಜನರು ಮುಂದಾಗುತ್ತಿಲ್ಲ..
ಸದ್ಯ ಇದೇ ಜಿಲ್ಲೆಯ ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿ ಕೇಂದ್ರದ ಮಾರುಕಟ್ಟೆಯಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲದೆ ಮತ್ತು ಮಾಸ್ಕ್ಗಳನ್ನು ಧರಿಸದೇ ಜನರು ಸಂಪೂರ್ಣವಾಗಿ ಲಾಕ್ ಡೌನ್ ಉಲ್ಲಂಘಿಸುತ್ತಿದ್ದಾರೆ.
ವಿಪರ್ಯಾಸವೆAದರೆ ರಸ್ತೆಯಲ್ಲಿ ನಿಂತು ಬೀಡಿ ಸೇದುವವರು,ಹರಟೆ ಹೊಡೆಯುವವರು,ಮಕ್ಕಳ ಓಡಾಟ,ಮಾಸ್ಕ್ ಹಾಕದೇ ಗುಂಪು ಗುಂಪಾಗಿ ನಿಲ್ಲುವುದು ಹೀಗೆ ಎಲ್ಲಾ ದೃಶ್ಯಗಳು ಇಲ್ಲಿ ಕಾಣ ಸಿಗುತ್ತವೆ.
ಈಗಲಾದ್ರೂ ಹುಣಸೂರು ತಾಲ್ಲೂಕಿನ ಆಡಳಿತ ಇತ್ತ ಗಮನ ಹರಿಸಿ ಲಾಕ್‌ಡೌನ್ ನಿಯಮವನ್ನು ಜನರು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಮಾಸೀಂ ಷರೀಫ್ ಎಕ್ಸ್ ಪ್ರೆಸ್ ಟಿವಿ ಹುಣಸೂರು(ಮೈಸೂರು)

Please follow and like us:

Related posts

Leave a Comment