ರಸ್ತೆಯಲ್ಲೇ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಫುಲ್ ಗರಂ..!

ಬೆAಗಳೂರು: ಕಳೆದ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರ ಮೇಲೆ ನಡೆದ ಹಲ್ಲೆಯಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅಸಮಾಧಾನಗೊಂಡಿದ್ದಾರೆ.ಹೀಗಾಗಿ ಪುಂಡಾಟ ನಡೆಸಿದವರಿಗೆ ಕಠಿಣ ಕಾನೂನಿನ ಪಾಠ ಕಲಿಸಲು ಮುಂದಾಗಿದ್ದಾರೆ.
ಇದರ ಮಧ್ಯೆಯೇ ಬೆಂಗಳೂರಿನ ಪೊಲೀಸ್ ಮಹಾ ನಿರ್ದೇಶಕರಿರುವ ನೃಪತುಂಗ ರಸ್ತೆಯಲ್ಲಿ ಅನಗತ್ಯವಾಗಿ ಕಾರು ಹಾಗೂ ಬೈಕ್‌ಗಳಲ್ಲಿ ಓಡಾಡುತ್ತಿದ್ದವರ ಮೇಲೆ ಸ್ವತಃ ಆಯುಕ್ತ ಭಾಸ್ಕರ್‌ರಾವ್ ಫುಲ್ ಗರಂ ಆದ ಘಟನೆ ನಡೆದಿದೆ.
ಅಂದ ಹಾಗೇ ನೃಪತುಂಗ ರಸ್ತೆಯಲ್ಲಿ ತಮ್ಮ ಕಾರಿ ನಿಲ್ಲಿಸಿಕೊಂಡು ತಪಾಸಣೆಗಿಳಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಚಳಿ ಬಿಡಿಸಿದ್ದಾರೆ.ಓರ್ವ ಚಾಲಕನಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಆಯುಕ್ತರು ಈತನ ಕಾರು ಸೀಜ್ ಮಾಡಿ ಎಂದು ಸ್ಥಳದಲ್ಲೇ ಆದೇಶ ಕೊಟ್ಟರು.
ಇದೇ ವೇಳೆ ಲಾಕ್‌ಡೌನ್ ಇದ್ದರೂ ನೃಪತುಂಗ ರಸ್ತೆಯಲ್ಲಿ ಮಾತ್ರ ಇಷ್ಟೊಂದು ವಾಹನ ಸಂಚರಿಸಿದ್ದನೂ ನೋಡಿ ಆಯುಕ್ತರೇ ದಂಗಾದ ಘಟನೆಯೂ ಜರುಗಿತು.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment