ಪಾದರಾಯನಪುರ ಗಲಭೆ,ಮಹಿಳಾ ರೌಡಿ ಸೇರಿ ಇತರರ ವಿರುದ್ಧ ಎಫ್‌ಐಆರ್

ಬೆಂಗಳೂರು:ಬೆAಗಳೂರಿನ ಪಾದರಾಯನಪುರದಲ್ಲಿ ಗಲಾಟೆ ಪ್ರಕರಣಕ್ಕೆ ಸಂಬAಧಿಸಿದAತೆ ಜೆ ಜೆ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಮುಖ ಆರೋಪಿಗಳಾದ ವಾಜಿದ್, ಇರ್ಫಾನ್ ಖಾನ್, ಹೌಲಿ ಬಾಬ್, ಕಬಿರ್, ಜಕ್ರಿಯಾ ಅಹಮ್ಮದ್, ಫರೋಜಾ ಖಾನ್ ಎಂಬುವರ ಕುಮ್ಮಕ್ಕಿನಿಂದ ಗಲಾಟೆಯಾಗಿದ್ದು,ಪೊಲೀಸರು ಪ್ರಮುಖ ಆರೋಪಿಗಳ ಹೆಸರನ್ನ ಉಲ್ಲೇಖಿಸಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿ ದ್ದಾರೆ. ಸದ್ಯ ಆರೋಪಿಗಳನ್ನು ಸ್ಥಳ ಮಹಜರುಗೆ ಕರೆದುಕೊಂಡು ಹೋಗಿ ಘಟನೆಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಡಿಸಿಪಿ ಅನುಚೇತ್ ನೇತೃತ್ವದ ತಂಡ ಪಡೆಯಲಿದೆ.
ಈಗಾಗಲೇ ಪೊಲೀಸರು ಐಪಿಸಿ ೧೮೮, ೩೫೩, ಎನ್‌ಡಿಎಮ್‌ಎ ಕಾಯ್ದೆ ೫೧,೫೨, ೫೪ ಸೆಕ್ಷನ್‌ಗಳಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇಷ್ಟು ಸೆಕ್ಷನ್‌ಗಳಡಿ ಸದ್ಯ ಕೇಸ್ ಹಾಕಿದ್ದು ಪ್ರಮುಖ ಆರೋಪಿಗಳು ಸೇರಿ ಒಟ್ಟು ೫೪ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದಕ್ಕು ಮುನ್ನ ಪೊಲೀಸರು ಬೆಂಗಳೂರಿನ ಪಾದರಾಯನಪುರದ ಗುಡ್ಡದಹಳ್ಳಿಯಲ್ಲಿ ಭಾನುವಾರ ರಾತ್ರಿ ಬಿಬಿಬಿಎಂಪಿ ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಮಹಿಳಾ ರೌಡಿ ಸೇರಿ ೫೪ ಮಂದಿಯನ್ನು ಬಂಧಿಸಿದ್ದರು.
ಅAದ ಹಾಗೇ ಕ್ವಾರಂಟೈನ್‌ಗೆ ಒಪ್ಪದ ಶಂಕಿತರು ಹಾಗೂ ಅವರ ಕಡೆಯವರು, ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ್ದರು. ರಸ್ತೆಗೆ ಅಡ್ಡವಾಗಿ ಹಾಕಿದ್ದ ತಗಡು, ಬ್ಯಾರಿಕೇಡ್ ಕಿತ್ತು ಹಾಕಿದ್ದರು. ಸ್ಥಳದಲ್ಲಿದ್ದ ಪೆಂಡಾಲ್ ಧ್ವಂಸ ಮಾಡಿದ್ದರು.
ಇನ್ನು ರಾತ್ರಿಯೇ ಸ್ಥಳಕ್ಕೆ ಹೋಗಿದ್ದ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ಘಟನೆ ಸಂಬAಧ ಜಗಜೀವನರಾಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಘಟನೆ ಸಂಬAಧ ಮಹಿಳಾ ರೌಡಿ ಫಿರೋಜಾ ಅಲಿಯಾಸ್ ಫರೋಜಾ ಸೇರಿ ೫೪ ಮಂದಿಯನ್ನು ಬಂಧಿಸಲಾಗಿದೆ. ಫಿರೋಜಾ, ಸ್ಥಳೀಯವಾಗಿ ಗಾಂಜಾ ಮಾರುತ್ತಿದ್ದಳು. ಆಕೆಯೇ ಸಂಚು ರೂಪಿಸಿ ಗಲಾಟೆ ಮಾಡಿಸಿದ್ದಾಳೆ.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment