ಪಾದರಾಯನಪುರದಲ್ಲಿ ಅಖಾಡಕ್ಕೆ ಗರುಡ ಫೋರ್ಸ್

ಬೆಂಗಳೂರು: ಕಳೆದ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದ ಪರಿಣಾಮ ರಾಜ್ಯ ಪೊಲೀಸ್ ಇಲಾಖೆ ಅದರಲ್ಲೂ ಬೆಂಗಳೂರು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.
ಸದ್ಯ ಗಲಾಟೆ ನಡೆದ ಪಾದರಾಯನಪುರದಲ್ಲಿ ಸದ್ಯ ಹೈ ಅಲರ್ಟ್ ಘೋಷಿಸಲಾಗಿದ್ದು, ಇಲ್ಲಿಯವರೆಗೆ ವಿನಾಕಾರಣ ಓಡಾಡುವವರ ಮೇಲೆ ಹದ್ದಿನ ಕಣ್ಣಿಟ್ಟು ಕ್ರಮ ಕೈಗೊಂಡಿದ್ದ ಪೊಲೀಸರ ಜೊತೆ ಇದೀಗ ಡಿ ಸ್ಕ್ವಾಟ್ ಟೀಂ ಹಾಗೂ ಗರುಡ ಪಡೆ ಕಾರ್ಯಾಚರಣೆಗೆ ಇಳಿದಿವೆ.
ಇನ್ನು ಪಾದರಾಯನಪುರದಲ್ಲಿ ಈ ಟೀಂನ ಸಿಬ್ಬಂದಿ ರೈಫಲ್ ಹಿಡಿದುಕೊಂಡು ನಡು ರಸ್ತೆಯಲ್ಲಿ ನಿಂತು ಮಾಸ್ಕ್ ಹಾಕದ, ಹೊರಗೆ ಓಡಾಡುವ ಜನರಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಒಂದು ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ಮತ್ತೆ ನಿರ್ಮಾಣವಾದರೆ ರೈಫಲ್‌ನಲ್ಲಿ ಉತ್ತರ ಕೊಡಲಿದ್ದಾರೆ.ಸದ್ಯ ಈ ತಂಡವನ್ನು ನೋಡಿ ಜನ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment