ಬೆಂಗಳೂರು:ಕೊರೊನಾ ವೈರಸ್ ನಿಂದಾಗಿ ಹೇರಲಾಗಿರುವ ಲಾಕ್ ಡೌನ್ ನಾಳೆಯಿಂದ ಭಾಗಶಃ ಸಡಿಲಗೊಳ್ಳಲಿದೆ.
ಕಟೈಂನ್‌ಮೆAಟ್ ವಲಯ ಹೊರತು ಪಡಿಸಿ ಉಳಿದ ಕಡೆಯಲ್ಲಿ ಲಾಕ್ಡೌವನ್ ನಿಯಮ ಸಡಿಲಗೊಳ್ಳಲಿದೆ.ಈ ಮೂಲಕ ಕಟ್ಟಡ ನಿರ್ಮಾಣ, ಅಗತ್ಯ ವಸ್ತುಗಳ ಕೈಗಾರಿಕೆ, ಕೆಲವು ಸರ್ಕಾರಿ ಕಚೇರಿಗಳು ತೆರೆಯಲಿವೆ.ಆದರೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ. ಸಾರ್ವಜನಿಕ ಸ್ಥಳದಲ್ಲಿ ೫ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಸರ್ಕಾರ ಸೂಚಿಸಿದೆ.
ಆದರೆ, ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಶಾಕ್ ನೀಡಿದೆ.ಮದ್ಯ ಮಾರಾಟ ಮೇ.೩ರವರೆಗೂ ಇರುವುದಿಲ್ಲ. ಹೊಟೇಲ್,ರೆಸ್ಟೋರೆಂಟ್‌ಗಳನ್ನು ತೆರೆಯುವಂತಿಲ್ಲ.ಯಾವುದೇ ಸಭೆ, ಕಾರ್ಯಕ್ರಮ ನಡೆಸುವಂತಿಲ್ಲ.ಅAತರ ಜಿಲ್ಲೆ ಸಂಚಾರ ಇರುವುದಿಲ್ಲ.
ಮೆಟ್ರೋ, ರೈಲು, ಬೈಕ್ ಸಂಚಾರ ಇರುವುದಿಲ್ಲ. ಜೊತೆಗೆ ಐಟಿ – ಬಿಟಿ ಕಂಪನಿ ತೆರೆಯಲು ಅನುಮತಿ ಇಲ್ಲ. ಮೇ ೩ರ ವರೆಗೆ ಬಿಎಂಟಿಸಿ, ಕೆಎಸ್‌ಆಂರ್ ಟಿಸಿ ಬಸ್ ಸಂಚಾರ ಇರುವುದಿಲ್ಲ.
ಆದರೆ, ಸೇಫ್ ಝೋನ್ನ ಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಸಿಮೆಂಟ್, ಜೆಲ್ಲಿ, ಗೂಡ್ಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ವೈಯಕ್ತಿಕ ಪಾಸ್ ಇದ್ದರೆ ಮಾತ್ರ ಸಂಚಾರಕ್ಕೆ ಅನುಮತಿ ಇರುತ್ತದೆ. ಸ್ವ ಉದ್ಯೋಗ ಮಾಡುವ ವ್ಯಕ್ತಿಗಳಿಗೆ, ಎಲೆಕ್ಟ್ರೀಷಿಯನ್ಸ್, ಐಟಿ ರಿಪೇರಿ, ಪ್ಲಂಬರ್, ಮೋಟಾರ್ ಮೆಕಾನಿಕ್ಸ್, ಕಾರ್ಪೆಂಟರ್ಸ್ ಗಳಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡಿಲಾಗಿದೆ.
ಗೂಡ್ಸ್ ರೈಲುಗಳ ಮೂಲಕ ಅಗತ್ಯ ವಸ್ತು ಸಾಗಾಟಕ್ಕೆ ಅನುಮತಿ ನೀಡಲಾಗಿದೆ. ತುರ್ತು ಅಗತ್ಯ ಸೇವೆಗಳ ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ತುರ್ತು ಸೇವೆಗಳಿಗಾಗಿ ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಕಾರಿನಲ್ಲಿ ಕೇವಲ ಇಬ್ಬರು ಮಾತ್ರ ಪ್ರಯಾಣಿಸಬೇಕು. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಅಗತ್ಯ ಸರ್ಕಾರಿ ಇಲಾಖೆಗಳನ್ನು ತೆರೆಯಬೇಕು.ಆದರೆ ಶೇ. ೩೩ರಷ್ಟು ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸಬೇಕು. ಅಗತ್ಯವಸ್ತುಗಳನ್ನು ಆನ್ಲೈಗನ್ನಬಲ್ಲಿ ಖರೀದಿ ಮಾಡಬಹುದು.
ಇಂದು ಮಧ್ಯ ರಾತ್ರಿಯಿಂದ ಲಾಕ್ ಡೌನ್ ಸಡಿಲಿಕೆ
೧. ಸೇಫ್ ಝೋನ್‌ನಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿಗೆ ಅನುಮತಿ. ಸಿಮೆಂಟ್, ಜೆಲ್ಲಿ, ಗೂಡ್ಸ್ ಸಂಚಾರಕ್ಕೆ ಅವಕಾಶ
೨. ವೈಯಕ್ತಿಕ ಪಾಸ್ ಇದ್ದರೆ ಮಾತ್ರ ಸಂಚಾರಕ್ಕೆ ಅನುಮತಿ. ಸ್ವ ಉದ್ಯೋಗ ಮಾಡುವ ವ್ಯಕ್ತಿಗಳಿಗೆ, ಎಲೆಕ್ಟ್ರೀಷಿಯನ್ಸ್, ಐಟಿ ರಿಪೇರಿ, ಪ್ಲಂಬರ್, ಮೋಟಾರ್ ಮೆಕಾನಿಕ್ಸ್, ಕಾರ್ಪೆಂಟರ್ಸ್ ಗಳಿಗೆ ಕೆಲಸ ನಿರ್ವಹಿಸಲು ಅವಕಾಶ.
೩. ಗೂಡ್ಸ್ ರೈಲುಗಳ ಮೂಲಕ ಅಗತ್ಯ ವಸ್ತು ಸಾಗಾಟಕ್ಕೆ ಅನುಮತಿ. ತುರ್ತು ಅಗತ್ಯ ಸೇವೆಗಳ ಸಾಗಾಟಕ್ಕೆ ಅವಕಾಶ.
ತುರ್ತು ಸೇವೆಗಳಿಗಾಗಿ ವಾಹನ ಓಡಾಟಕ್ಕೆ ಅವಕಾಶ. ಕಾರಿನಲ್ಲಿ ಕೇವಲ ಇಬ್ಬರಿಗೆ ಮಾತ್ರ ಪ್ರಯಾಣಸಲು ಅವಕಾಶ
೪. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆಗೆ ಅವಕಾಶ. ಅಗತ್ಯ ಸರ್ಕಾರಿ ಇಲಾಖೆಗಳ ಕಾರ್ಯನಿರ್ವಹಣೆ.ಶೇ.೩೩ರಷ್ಟು ಸಿಬ್ಬಂದಿ ಮಾತ್ರ ಕೆಲಸ ನಿರ್ವಹಣೆ. ಅಗತ್ಯವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿ
೫. ಮೆಟ್ರೋ, ರೈಲು, ಬೈಕ್ ಸಂಚಾರ ಇರಲ್ಲ.ಐಟಿ-ಬಿಟಿ ಕಂಪನಿ ತೆರೆಯಲು ಅನುಮತಿ ಇಲ್ಲ.ಮೇ ೩ರವರೆಗೆ ಬಿಎಂಟಿಸಿ, ಕೆಎಸ್‌ಆರ್ ಟಿಸಿ ಬಸ್ ಸಂಚಾರ ಇಲ್ಲ.
೬. ಮದ್ಯ ಮಾರಾಟ ಮೇ ೩ರವರೆಗೂ ಇರಲ್ಲ. ಹೋಟೆಲ್, ರೆಸ್ಟೋರೆಂಟ್‌ಗಳನ್ನು ತೆರೆಯುವಂತಿಲ್ಲ. ಯಾವುದೇ ಸಭೆ, ಕಾರ್ಯಕ್ರಮ ನಡೆಸುವಂತಿಲ್ಲ. ಅಂತರ ಜಿಲ್ಲೆ ಸಂಚಾರ ಇರುವುದಿಲ್ಲ.
೭.ನಾಳೆಯಿಂದ ಕಟೈಂನ್‌ಮೆAಟ್ ವಲಯ ಹೊರತು ಪಡಿಸಿ ಉಳಿದ ಕಡೆಯಲ್ಲಿ ಲಾಕ್‌ಡೌನ್ ನಿಯಮ ಸಡಿಲ
ಕಟ್ಟಡ ನಿರ್ಮಾಣ, ಅಗತ್ಯ ವಸ್ತುಗಳ ಕೈಗಾರಿಕೆ, ಕೆಲ ಸರ್ಕಾರಿ ಕಚೇರಿಗಳು ಆರಂಭ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ. ಸಾರ್ವಜನಿಕ ಸ್ಥಳದಲ್ಲಿ ೫ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.
ಲಾಕ್‌ಡೌನ್ ಸಡಿಲಿಕೆ ಯಾವುದಕ್ಕೆ ಇಲ್ಲಿದೆ ನೋಡಿ..
೧.ಪೇಪರ್, ರಸಗೊಬ್ಬರ, ಎಪಿಎಂಸಿ ಮಾರ್ಕೆಟ್ ಸಂಪೂರ್ಣ ಓಪನ್
೨.ಅಂತರರಾಜ್ಯ ವಾಹನ ಓಡಾಡಕ್ಕೆ ಅವಕಾಶ
೩.ಕೃಷಿ ಮತ್ತು ಮೀನುಗಾರಿಕೆ ವಲಯಕ್ಕೆ ಸಂಪೂರ್ಣ ಅನುಮತಿ
೪.ಕಂಟೋನ್ಮೆAಟ್ ಜೋನ್‌ಗೆ ಯಾವುದೇ ಅನುಮತಿ ಇಲ್ಲ
೫.ಕೃಷಿ ನೀರಾವರಿಗೆ ಯಾವುದೇ ನಿರ್ಬಂಧ ಇಲ್ಲ
೬.ಕಟ್ಟಡ ನಿರ್ಮಾಣಕ್ಕೆ ಅನುಮತಿ
೭.ಕಟ್ಟಡ ಕಾಮಾಗರಿಗಳಿಗೆ ಅನುಮತಿ
೮.ಟೀ ಕಾಫಿ ಪ್ಲಾಂಟೇಷನ್‌ಗೆ ಅನುಮತಿ
೯.ಪಾಸ್ ಇದ್ದವರಿಗಷ್ಟೇ ಸಂಚಾರಕ್ಕೆ ಅನುಮತಿ
೧೦.ಗ್ರಾಮೀಣ ಪ್ರದೇಶದಲ್ಲಿ ರಸ್ತೆಗೆ ಕಾಮಗಾರಿಗೆ ಅವಕಾಶ
೧೧.ಪಶುಸಂಗೋಪನೆಗೆ ಅವಕಾಶ
೧೨.ಬ್ಯಾಂಕುಗಳ ನಿರ್ವಹಣೆಗೆ ಮುಂದುವರಿಕೆ
೧೩.ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಗಳಿಗೆ ಅವಕಾಶ
೧೪.ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಇಲ್ಲ
೧೫.ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್ ತೆರೆಯುವುದಿಲ್ಲ
೧೬.ಸದ್ಯಕ್ಕೆ ಶಾಲಾ ಕಾಲೇಜು ತೆರೆಯುವಂತಿಲ್ಲ
೧೭.ಟ್ಯಾಕ್ಸಿ ಆಟೋ ಬಸ್ ಸಂಚಾರ ಬಂದ್
೧೮.ಕೋರಿಯಾರ್ ಸೇವೆಗೆ ಅನುಮತಿ
೧೯.ವಾಣಿಜ್ಯ ಮತ್ತು ಕೈಗಾರಿಕೆಗೆ ಇಲ್ಲ ಅವಕಾಶ
ನ್ಯೂಸ್ ಬ್ಯೂರೋ ಎಕ್ ್ಸಪ್ರೆಸ್ ಟಿವಿ ಬೆಂಗಳೂರು