ಆಕಸ್ಮಿಕ ಬೆಂಕಿ, ಲಕ್ಷಾಂತರ ಮೌಲ್ಯದ ಬಾಳೆ ಬೆಂಕಿಗಾಹುತಿ

ಶಿರಾ(ತುಮಕೂರು): ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಹಾಗೂ ಹನಿ ನೀರಾವರಿ ಸಮಗ್ರಿ ಬೆಂಕಿಗಾಹುತಿಯಾದ ಘಟನೆ ಶಿರಾ ತಾಲೂಕಿನ ಮಾಗೋಡು ಬಳಿ ನಡೆದಿದೆ.
ಗ್ರಾಮದ ಈರಣ್ಣ ಎಂಬುವವರ ತೋಟದಲ್ಲೇ ಈ ಬೆಂಕಿ ಅವಘಡ ಸಂಭವಿಸಿದ್ದು,ಬೆAಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಶೀಘ್ರವೇ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಇನ್ನು ಬರಗಾಲದ ಮತ್ತು ಲಾಕ್‌ಡೌನ್ ನಡುವೆಯೇ ಈ ಬೆಂಕಿ ಅನಾಹುತ ಸಂಭವಿಸಿರುವುದರಿAದ ರೈತ ಈರಣ್ಣರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ.

ಶ್ರೀಮಂತ್ ಕುಮಾರ್ ಎಕ್ ್ಸಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment