ಬೈಕ್‌ಗೆ ಲಾರಿ ಡಿಕ್ಕಿ, ಒಂದೇ ಕುಟುಂಬದ ಮೂವರ ಸಾವು

ಸಿಂಧನೂರು(ರಾಯಚೂರು):ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಬಳಿ ನಡೆದಿದೆ.
ಮಾಟೂರು ಗ್ರಾಮದ ಪರಸಪ್ಪ , ಪತ್ನಿ ಕನಕಮ್ಮ , ಪುತ್ರಿ ನಾಗಮ್ಮ ಮೃತಪಟ್ಟವರಾಗಿದ್ದಾರೆ.
ಸದ್ಯ ಪರಸಪ್ಪನ ಪತ್ನಿ ಗರ್ಭಿಣಿಯಾಗಿದ್ದರಿಂದ ಆರೋಗ್ಯ ತಪಾಸಣೆಗಾಗಿ ಮಗಳೊಂದಿಗೆ ತೆರಳುತ್ತಿದ್ದ. ಈ ವೇಳೆ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.
ಇನ್ನು ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದು,ಈ ಸಂಬAಧ ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment