ಕಳ್ಳಬಟ್ಟಿ ಅಡ್ಡೆ ಮೇಲೆ ಅಬಕಾರಿ,ಪೊಲೀಸ್ ಜಂಟಿ ಕಾರ್ಯಾಚರಣೆ 600 ಲೀ. ಕಳ್ಳಬಟ್ಟಿ ವಶ..

ಲಿಂಗಸೂಗೂರು(ರಾಯಚೂರು):ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೊರೊನಾ ವೈರಸ್ ಹರಡದಂತೆ ತಡೆಯಲು ಅನೇಕ ಕ್ರಮಗಳನ್ನು ಕೈಗೊಂಡಿದ್ದು,ಅದರಲ್ಲಿ ಸಾರಾಯಿ ಮಾರಾಟ ಕೂಡ ನಿಷೇಧ ಮಾಡಲಾಗಿದೆ.
ಇದರಿಂದಾಗಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತಾಂಡಾಗಳ ವ್ಯಾಪ್ತಿಯಲ್ಲಿ ಕಾಡು, ಗುಡ್ಡದ ಮರೆಗಳಲ್ಲಿ ನಿರಂತರವಾಗಿ ಕಳ್ಳಬಟ್ಟಿ ದಂಧೆ ರಾಜಾರೋಷವಾಗಿ ನಡಿತಿದೆ.
ಇನ್ನು ಕಳ್ಳಬಟ್ಟಿ ತಾಣಗಳ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಜಕ್ಕೇರುಮಡು ತಾಂಡದಲ್ಲಿ ಅಬಕಾರಿ ಡಿಎಸ್‌ಪಿ ಮೈನುದ್ದೀನ್ ಹಾಗೂ ಮಸ್ಕಿ ಸಿಪಿಐ ದೀಪಕ್ ಬೋಸರೆಡ್ಧಿ ನೇತೃತ್ವದಲ್ಲಿ ದಾಳಿ ನಡೆಸಿ,೧೫೦ ಬಿಂದಿಗೆಗಳಲ್ಲಿ ತುಂಬಿ ಇಟ್ಟಿದ್ದ ೬೦೦ ಲೀಟರ್‌ಕ್ಕೂ ಹೆಚ್ಚು ಕಳ್ಳಬಟ್ಟಿ,
೧೮ ಬ್ಯಾಗ್ ಬೆಲ್ಲ ವಶಕ್ಕೆ ಪಡೆದು ಅದನ್ನು ಸ್ಥಳದಲ್ಲೇ ನಾಶ ಮಾಡಿದ್ದಾರೆ.
ಇದೇ ವೇಳೆ ಕಾಳಪ್ಪ ಪುಲ್ಲಪ್ಪ ರಾಠೋಡ್,ಪುಲ್ಲಪ್ಪ ಜೀತಪ್ಪ ರಾಠೋಡ್ ಎಂಬ ಆರೋಪಿಗಳನ್ನು ಬಂಧಿಸಿದ್ದು,ಈ ಸಂಬ0ಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು

Please follow and like us:

Related posts

Leave a Comment