ನಾಗಮಂಗಲಕ್ಕೂ ಅಂಟಿದ ಮುಂಬೈ ಕೊರೊನಾ ನಂಟು..

ನಾಗಮಂಗಲ(ಮಂಡ್ಯ): ದೆಹಲಿ ಮತ್ತು ನಂಜನಗೂಡಿನ ಪ್ರಕರಣಗಳು ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದರೆ, ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲದ ಪ್ರಕರಣ ವಿಭಿನ್ನವಾಗಿದೆ.
ಯಾಕಂದ್ರೆ ಮಹಾರಾಷ್ಟ್ರದ ರಾಜಧಾನಿ ಮುಂಬೈನ ನಂಟು ನಾಗಮಂಗಲದಲ್ಲಿ ಸದ್ದು ಮಾಡುತ್ತಿದೆ.
ಸದ್ಯ ರೆಡ್ ಝೋನ್‌ನಲ್ಲಿದ್ದರೂ ಆತಂಕದಿ0ದ ದೂರ ಉಳಿದಿದ್ದ ನಾಗಮಂಗಲ ತಾಲ್ಲೂಕಿನ ಜನತೆಗೆ ಮುಂಬೈ ವಾಸಿ ಸಾತೇನಹಳ್ಳಿಯ ವ್ಯಕ್ತಿಯೋರ್ವನಿಗೆ ಕೊರೊನಾ ವೈರಸ್ ಧೃಡಪಟ್ಟಿರುವ ಸುದ್ದಿ ಹರಡುತ್ತಿದ್ದಂತೆ ಬರ ಸಿಡಿಲು ಬಡಿದಂತಾಗಿದೆ.
ಇನ್ನು ಸಾವಿರಾರು ಕಿ.ಮೀ. ದೂರದ ಮುಂಬೈನಿ0ದ ಸಾತೇನಹಳ್ಳಿ ಸ್ವ ನಿವಾಸಕ್ಕೆ ಆಗಮಿಸಿರುವ ಬಗ್ಗೆ ಸ್ಥಳೀಯ ಆಶಾ ಕಾರ್ಯಕರ್ತೆ, ಆರೋಗ್ಯ ಇಲಾಖೆಗೆ ನೀಡಿದ ಮಾಹಿತಿಯ ಮೇರೆಗೆ ಮಾಡಲಾದ ಹೋಂ ಕ್ವಾರಂಟೈನ್‌ನೊ0ದಿಗೆ ಏಪ್ರಿಲ್ ೨೪ ರಂದು ನಡೆಸಿದ್ದ ಕೊರೊನಾ ಪರೀಕ್ಷೆಯ ಫಲಿತಾಂಶ ಇಡೀ ಜಿಲ್ಲಾಡಳಿತದ ನಿದ್ರೆಗೆಡಿಸಿದೆ.ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಿರುವ ಅಧಿಕಾರಿಗಳು ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯ ಪತ್ತೆಗೆ ಜಾಲ ಬೀಸಿದ್ದಾರೆ.

ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ(ಮಂಡ್ಯ)

Please follow and like us:

Related posts

Leave a Comment