ಸಾಲ ಕೇಳಿದವನನ್ನೇ ಕೊಂದೇ ಬಿಟ್ಟರಲ್ಲ..

ಹುಣಸೂರು(ಮೈಸೂರು):ಜಿಲ್ಲೆಯ ಹುಣಸೂರು ನಗರದ ಸಾಮಿಲ್‌ವೊಂದರಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೇವಲ ೧೦ ಸಾವಿರ ರೂಪಾಯಿ ಸಾಲದ ವಿಚಾರಕ್ಕೆ ಕೊಲೆ ನಡೆದಿರುವುದು ಬಯಲಾಗಿದೆ.
ಕೊಲೆಯಾದ ಯುವಕ ಗಣೇಶ್ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ನಿವಾಸಿ. ಧನು ಎಂಬ ವ್ಯಕ್ತಿಗೆ ಈತ ಸಾಲ ನೀಡಿದ್ದ.
ಈ ಸಾಲದ ಹಣವನ್ನು ಹಿಂತಿರುಗಿಸಿ ಕೊಡುವುದಾಗಿ ಏಪ್ರಿಲ್ ೨೩ರಂದು ರಾತ್ರಿ ಹುಣಸೂರಿನ ಸಾಮಿಲ್ ಬಳಿ ಕರೆಸಿಕೊಂಡಿದ್ದಾನೆ. ಅಲ್ಲಿಯೇ ರಾತ್ರಿ ಗಣೇಶ್‌ಗೆ ಊಟ ಮಾಡಿಸಿದ್ದಾನೆ. ಇದಾದ ನಂತರ ಸಲ್ಮಾನ್ ಹಾಗೂ ಮಾದೇವ ನಾಯ್ಕ ಎಂಬುವರ ಸಹಾಯ ಪಡೆದುಕೊಂಡು ಅದೇ ರಾತ್ರಿ ಗಣೇಶ್‌ನನ್ನು ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ ನಂತರ ದೇಹವನ್ನು ಸುಟ್ಟು ಹಾಕುವ ಯತ್ನ ಕೂಡ ನಡೆಸಿದ್ದರಂತೆ.ಆದರೆ,ಹೆದರಿ ಹೆಣವನ್ನು ಅಲ್ಲೇ ಸಮೀಪದಲ್ಲಿದ್ದ ಪೊದೆಗೆ ಎಸೆದು ಹೋಗಿದ್ದಾರೆ. ಅಲ್ಲದೇ ಆತನ ಜೇಬಿನಲ್ಲಿದ್ದ ೧೫ ಸಾವಿರ ರೂಪಾಯಿ ಹಣ ತೆಗೆದುಕೊಂಡು ಹೋಗಿದ್ದಾರೆ.
ಪೊಲೀಸರು ಈ ಮೂವರನ್ನೂ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಘಟನೆ ಸತ್ಯ ಸಂಗತಿ ಬಾಯ್ಬಿಟ್ಟಿದ್ದಾರೆ.

ಮಾಸೀಂ ಶರೀಪ್ ಎಕ್ಸ್ ಪ್ರೆಸ್ ಟಿವಿ ಹುಣಸೂರು(ಮೈಸೂರು)

Please follow and like us:

Related posts

Leave a Comment