ಲಾಕ್‌ಡೌನ್ ಮುಂದುವರಿಕೆ, ಏನಿರುತ್ತೆ.?ಏನಿರಲ್ಲ..? ನೋಡಿ..

ನವದೆಹಲಿ:ಎರಡನೇ ಹಂತದ ಲಾಕ್‌ಡೌನ್ ಮುಗಿಯಲು ಇನ್ನೂ ಮೂರು ದಿನ ಬಾಕಿ ಇರುವಾಗಲೇ ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್ ಡೌನ್ ಘೋಷಿಸಿದೆ.
ಸದ್ಯ ಮೇ ೧೭ರ ವರೆಗೆ ಈ ಲಾಕ್ ಡೌನ್ ಮುಂದುವರಿಯಲಿದ್ದು, ಈ ವೇಳೆ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ ಮೊದಲಾದವುಗಳ ಮಾರಾಟಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ. ಶಾಲಾ-ಕಾಲೇಜುಗಳಿಗೆ ಎಂದಿನAತೆ ಲಾಕ್ ಡೌನ್ ಮುಗಿಯುವವರೆಗೂ ರಜೆ ಘೋಷಿಸಲಾಗಿದೆ.
ಜೊತೆಗೆ ಸಾರಿಗೆ ಸಂಚಾರಕ್ಕೆ ನಿರ್ಬಂಧವಿದ್ದು, ವಿಮಾನ, ರೈಲುಗಳ ಸಂಚಾರವೂ ಇರುವುದಿಲ್ಲ. ಗ್ರೀನ್ ಜೋನ್ ವಲಯದಲ್ಲಿ ಈಗಾಗಲೇ ಘೋಷಿಸಲಾಗಿರುವ ವಿನಾಯಿತಿಗಳು ಮುಂದುವರಿಯುತ್ತವೆ. ಮೂರೂ ವಲಯಗಳಲ್ಲಿ ಹೋಟೆಲ್ ಗಳಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶವಿದ್ದು, ಪಬ್, ಕ್ಲಬ್, ಚಿತ್ರಮಂದಿರ, ಮಾಲ್ ಗಳನ್ನು ತೆರೆಯುವುದಕ್ಕೆ ನಿರ್ಬಂಧ ಹೇರಲಾಗಿದೆ. ಕಾರಿನಲ್ಲಿ ಇಬ್ಬರು ಮಾತ್ರ ಪ್ರಯಾಣಿಸಲು ಅವಕಾಶವಿದ್ದು, ಬೈಕಿನಲ್ಲಿ ಒಬ್ಬರು ಮಾತ್ರ ಸಂಚಾರ ಮಾಡಬಹುದಾಗಿದೆ. ಆರೆಂಜ್ ಜೋನ್ ನಲ್ಲಿ ಕ್ಯಾಬ್ ಮತ್ತು ಟ್ಯಾಕ್ಸಿಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ.
ಪ್ರಮುಖವಾಗಿ ಮಕ್ಕಳು ಮತ್ತು ವಯೋವೃದ್ಧರು ಮನೆಯಲ್ಲೇ ಇರುವಂತೆ ಸೂಚಿಸಲಾಗಿದ್ದು, ಉಳಿದವರು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಹೊರ ಬರಬಹುದಾಗಿದೆ. ಗ್ರೀನ್ ಜೋನ್ ನಲ್ಲಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಿದೆ ಶೇಕಡಾ ೫೦ ಸೀಟುಗಳನ್ನು ಮಾತ್ರ ಭರ್ತಿ ಮಾಡಬಹುದಾಗಿದೆ.
ಇದೇ ವೇಳೆ ದೇಶದ ಜಿಲ್ಲೆಗಳನ್ನು ಕೆಂಪು(ಹಾಟ್‌ಸ್ಪಾಟ್) ಹಸಿರು ಮತ್ತು ಕಿತ್ತಳೆ ವಲಯಗಳಾಗಿ ಅಪಾಯದ ವಿವರಗಳ ಆಧಾರದ ಮೇಲೆ ಈ ಅವಧಿಯಲ್ಲಿ ವಿವಿಧ ಚಟುವಟಿಕೆಗಳನ್ನು ನಿಯಂತ್ರಿಸಲು ಎಂಹೆಚ್ ಎ ಹೊಸ ಮಾರ್ಗಸೂಚಿಗಳನ್ನು ಸಹ ನೀಡಿದೆ.
ಕಿತ್ತಳೆ ವಲಯಗಳಲ್ಲಿ, ಕೆಂಪು ವಲಯದಲ್ಲಿ ಅನುಮತಿಸಲಾದ ಚಟುವಟಿಕೆಗಳ ಜೊತೆಗೆ, ಟ್ಯಾಕ್ಸಿಗಳು ಮತ್ತು ಕ್ಯಾಬ್ ಅಗ್ರಿಗೇಟರ್‌ಗಳನ್ನು ಒಬ್ಬ ಚಾಲಕ ಮತ್ತು ಒಬ್ಬ ಪ್ರಯಾಣಿಕರೊಂದಿಗೆ ಮಾತ್ರ ಅನುಮತಿಸಲಾಗುತ್ತದೆ ಅಂತ ತಿಳಿಸಿದೆ.
ಏನಿರಲ್ಲ..?
೧) ಶಾಲಾ-ಕಾಲೇಜು, ವಿದ್ಯಾಸಂಸ್ಥೆ ನಡೆಸುವಂತಿಲ್ಲ
೨) ಜಿಮ್
೩) ಸಭೆ ಸಮಾರಂಭ ನಡೆಸುವಂತಿಲ್ಲ
೪) ಹೊರಗಿನಿಂದ ಜನ ಬರುವಂತಿಲ್ಲ
೫) ರೈಲು ಸಂಚಾರ, ವಿಮಾನ ಸಂಚಾರ, ಮೆಟ್ರೋ ಸಂಚಾರ
೬) ತರಬೇತಿ ಸಂಸ್ಥೆ. ಹೋಟೆಲ್, ರೆಸ್ಟೋರೆಂಟ್ ಬಂದ್
೭) ಗುಂಪು ಗುಂಪಾಗಿ ಜನ ಸೇರುವಂತಿಲ್ಲ
ಏನಿರುತ್ತೆ.?
೧) ಹಾಲು ಹಣ್ಣು ತರಕಾರಿ
೨) ವೈದ್ಯಕೀಯ ತುರ್ತು ಸೇವೆ ಇದ್ದರಷ್ಟೇ ಸಂಚಾರ
೩) ಮೆಡಿಕಲ್ ಶಾಪ್
೪) ಎಲ್ಲಾ ರೀತಿಯ ಅಂಗಡಿಗಳು
೫) ವೈದ್ಯಕೀಯ ತುರ್ತು ಸೇವೆ,
೬) ಕೈಗಾರಿಕಾ ಚಟುವಟಿಕೆ (೩೩ %)
೭) ಕೊರಿಯರ್ ಅಂಚೆ ಸೇವೆ ಆರಂಭ

 

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ನವದೆಹಲಿ

Please follow and like us:

Related posts

Leave a Comment