ಎಣ್ಣೆ ಪ್ರಿಯರಿಗಿಲ್ಲ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರ ಇನ್ನೇರಡು ವಾರ ಲಾಕ್‌ಡೌನ್ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಮೇ.೧೭ರವರೆಗೆ ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ ಇಲ್ಲದಂತಾಗಿದೆ.
ಅ0ದ ಹಾಗೇ ಮೇ ೧೭ರವರೆಗೂ ಲಾಕ್ ಡೌನ್ ಮುಂದುವರೆದಿರುವುದರಿ0ದ ಯಾವುದೇ ವಲಯಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿಲ್ಲ.
ಹೊಸ ಮಾರ್ಗಸೂಚಿಯಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲ. ಮೇ ೧೭ ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲದಂತೆ ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿ ಹೊರಡಿಸಿದೆ.
ಇನ್ನು ಅಗತ್ಯ ವಸ್ತುಗಳ ಮತ್ತು ಸೇವೆಗಳ ಹೊರತುಪಡಿಸಿ ಗ್ರೀನ್ ಜೋನ್ ಗಳಿಗೆ ಕೆಲವೊಂದು ವಿನಾಯಿತಿ ನೀಡಲಾಗಿದೆ.ಉಳಿದಂತೆ ರೆಡ್ ಜೋನ್ ಗಳಲ್ಲಿ ಲಾಕ್ ಡೌನ್ ನಿರ್ಬಂಧ ಮುಂದುವರೆಯಲಿದೆ. ಮದ್ಯ ಮಾರಾಟಕ್ಕೆ ಮಾತ್ರ ಯಾವ ಜೋನ್‌ಗಳಲ್ಲಿಯೂ ಅವಕಾಶವೇ ಇಲ್ಲವೆಂದು ಹೇಳಲಾಗಿದೆ.
ಒಟ್ಟಾರೆ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಮದ್ಯದಂಗಡಿಗಳು ಬಂದ್ ಆಗಿದ್ದು ಮದ್ಯ ಪ್ರಿಯರು ಯಾವಾಗ ವೈನ್ ಶಾಪ್ ಓಪನ್ ಆಗುತ್ತವೆ ಎನ್ನುವುದನ್ನೇ ಕಾಯತೊಡಗಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ನವದೆಹಲಿ

Please follow and like us:

Related posts

Leave a Comment