ಊರಿಗೆ ತೆರಳಲು ಕಾತರ, ಕಾಲ್ನಡಿಗೆಯಲ್ಲಿ ಮೆಜಿಸ್ಟಿಕ್‌ವರೆಗೂ ಕಾರ್ಮಿಕರ ಪ್ರಯಾಣ

ಬೆಂಗಳೂರು:ಲಾಕ್‌ಡೌನ್ ಕಾರಣದಿಂದ ಕಳೆದ ಒಂದೂವರೆ ತಿಂಗಳಿನಿAದ ಬೆಂಗಳೂರು ನಗರದ ಅಲ್ಲಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಇತರ ನಾಗರಿಕರಿಗೆ ಇಂದು ಊರಿಗೆ ಹೋಗಲು ಒಂದು ಬಾರಿ ಸರ್ಕಾರ ಅವಕಾಶ ನೀಡಿರುವುದು ಇದೀಗ ವ್ಯಾಪಕ ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗ್ಗೆಯಿಂದಲೇ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಬೃಹತ್ ಸಂಖ್ಯೆಯಲ್ಲಿ ಸಾವಿರಾರು ಕಾರ್ಮಿಕರು ತಮ್ಮೂರಿಗೆ ತೆರಳಲು ಆಗಮಿಸಿದ್ದರು. ಮೆಜೆಸ್ಟಿಕ್‌ನಲ್ಲಿ ನೂಕುನುಗ್ಗಲು ಉಂಟಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಇಲ್ಲಿಗೆ ಗಾಳಿಗೆ ತೂರಿಹೋಗುತ್ತಿರುವುದು ಕಂಡುಬರುತ್ತಿದೆ.
ಇನ್ನು ಎಲೆಕ್ಟ್ರಾನಿಕ್ ಸಿಟಿ ಬಳಿಯ ದೊಡ್ಡನಾಗಮಂಗಲದ ಕಾರ್ಮಿಕರು ತಮ್ಮ ಸ್ವಂತ ಊರಾದ ಯಾದಗಿರಿಗೆ ತೆರಳಲು ಎಲೆಕ್ಟ್ರಾನಿಕ್ ಸಿಟಿಯಿಂದ ಮೆಜೆಸ್ಟಿಕ್‌ವರೆಗೂ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ.
ಇದೇ ವೇಳೆ ಬಸ್ಸಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಿತಿಯ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ದೂರದೂರುಗಳಿಗೆ ಕರೆದುಕೊಂಡು ಹೋಗಬೇಕಾಗಿರುವುದರಿಂದ ಕೆಎಸ್‌ಆರ್‌ಟಿಸಿ ಎರಡು,ಮೂರು ಪಟ್ಟು ಹೆಚ್ಚು ದರ ಕೇಳಿತ್ತು.ಅಲ್ಲದೆ, ವಲಸೆ ಕೂಲಿ ಕಾರ್ಮಿಕರು ಸಾವಿರಾರು ರೂಪಾಯಿಗಳನ್ನು ಎಲ್ಲಿಂದ ತರುವುದು, ಕೆಎಸ್ ಆರ್ ಟಿಸಿ ಪ್ರಯಾಣಿಕರಿಂದ ಹಗಲು ದರೋಡೆ ಮಾಡುತ್ತಿದೆ ಎಂಬ ಕೂಗು ವ್ಯಾಪಕವಾಗಿ ಕೇಳಿಬಂದಿತ್ತು.ಆದರೆ ಇದರಿಂದ ಎಚ್ಚೆತ್ತುಕೊಂಡ ಸಿಎಂ ಕೂಡಲೇ ಕೆಎಸ್‌ಆರ್‌ಟಿಸಿ ದರವನ್ನು ಹಿಂದಿನAತೆ ತೆಗೆದುಕೊಳ್ಳಲು ಆದೇಶ ನೀಡಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment