ಕೊರೊನಾಗಿಂತ ಮಳ್ಳವಳ್ಳಿಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆರ್ಭಟವೇ ಹೆಚ್ಚು..

ಮಳವಳ್ಳಿ(ಮಂಡ್ಯ):ಮಳವಳ್ಳಿ ಪಟ್ಟಣದ ಇನ್ಸ್ ಪೆಕ್ಟರ್ ಸಿ.ಎನ್.ರಮೇಶ್ ದೌರ್ಜನ್ಯ ಹಾಗೂ ದಬ್ಬಾಳಿಕೆ ಹೆಚ್ಚಾಗಿದ್ದು,ಕೂಡಲೇ ಅಮಾನತ್ತು ಮಾಡಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಮಾಜಿ ಪುರಸಭಾಧ್ಯಕ್ಷ ಚಿಕ್ಕರಾಜು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮುಗ್ದ ಜನರ ಮೇಲೆ ಬಹಳಷ್ಟು ದೌರ್ಜನ್ಯ ನಡೆಸಿದ್ದು,ಒಡೆಯುವುದು,ಎದುರಿಸುವುದು, ಕೇಸುಗಳನ್ನು ಹಾಕಿ ಇನ್ಸ್ ಪೆಕ್ಟರ್ ಸಿ.ಎನ್.ರಮೇಶ್ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಲಾಕ್‌ಡೌನ್ ಆದ ನಂತರ ಇವರ ಉದ್ಗಟತನ ಹೆಚ್ಚಾಗಿದೆ.ಬೆಳಿಗ್ಗೆ ೬ ಗಂಟೆಯಿAದ ಬೆಳಿಗ್ಗೆ ೭ ಗಂಟೆಯ ಸಮಯದಲ್ಲೂ ಅಗತ್ಯ ವಸ್ತು ಖರೀದಿಸಲು ರೈತರು,ಸಾರ್ವಜನಿಕರು, ವ್ಯಾಪಾರಸ್ಥ ಬಂದರೆ ಉದ್ದೇಶ ಪೂರ್ವಕ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನೂ ರಮೇಶರ ಮೇಲಿನ ಆರೋಪ ಪಟ್ಟಿಯ ಮನವಿ ಪತ್ರವನ್ನು ಡಿವೈಎಸ್‌ಪಿ ಪೃಥ್ವಿರಿಗೆ ನೀಡಿದ್ದೇವೆ.ಸೋಮವಾರದೊಳಗೆ ಇನ್ಸ್ ಪೆಕ್ಟರ್ ವಿರುದ್ದ ಕಾನೂನು ಕ್ರಮ ಕೈಗೊಳ್ಳದಿದ್ದರೆ ಸೋಮವಾರ ನಂತರ ಮುಖಂಡರ ಸಭೆ ಕರೆದು ಚರ್ಚೆ ಮಾಡಿ ಮುಂದಿನ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಹಿಂದೆಯೂ ಇನ್ಸ್ ಪೆಕ್ಟರ್ ರಮೇಶ್ ವಿರುದ್ದ ಹಲವು ಅಪವಾದಗಳು ಇದ್ದರೂ ಇದುವರೆಗೂ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಟಿ ಪುರಸಬೆ ಸದಸ್ಯ ಪ್ರಶಾಂತ್, ಮಾಜಿಸದಸ್ಯ ರಮೇಶ್, ಚಿಕ್ಕಮೊಗ್ಗಣ್ಣ, ಪ್ರಭು, ಕುಮಾರ್ ಸೇರಿದಂತೆ ಮತ್ತಿತ್ತರರು ಇದ್ದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment