ನಾಳೆಯಿಂದ `ಎಣ್ಣೆ ಅಂಗಡಿ’ ಓಪನ್..

ಆನೇಕಲ್(ಬೆಂ.ನಗರ): ನಾಳೆಯಿಂದ ಕಂಟೈನ್‌ಮೆAಟ್ ಜೊನ್‌ಗಳನ್ನು ಬಿಟ್ಟು ಬೇರೆ ಎಲ್ಲ ಕಡೆ ಮದ್ಯದಂಗಡಿಗಳು ತೆರೆಯಲಿವೆ. ಆದರೆ ಮದ್ಯ ಖರೀದಿಗೆ ಸರ್ಕಾರ ಕೆಲ ಷರತ್ತುಗಳು ಮತ್ತು ಮಿತಿಯನ್ನು ಹೇರಿದೆ.
ಕೊರೊನಾ ಲಾಕ್‌ಡೌನಿಂದ ಹಲವಾರು ದಿನಗಳಿಂದ ಮುಚ್ಚಿದ್ದ ಮದ್ಯದಂಗಡಿಗಳು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ರಾಜ್ಯ ಸರ್ಕಾರವೂ ಕೆಲ ನಿಮಗಳು ಮತ್ತು ಷರತ್ತುಗಳನ್ನು ವಿಧಿಸಿದೆ. ಜೊತೆಗೆ ಒಂದು ದಿನಕ್ಕೆ ಒಬ್ಬರಿಗೆ ಇಂತಿಷ್ಟೇ ಮದ್ಯ ನೀಡಬೇಕು ಎಂದು ನಿಗದಿ ಮಾಡಿದೆ.
ಇನ್ನು ಮದ್ಯ ಮಾರಾಟಕ್ಕೆ ಸರ್ಕಾರ ನಾಳೆಯಿಂದ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆ ಮದ್ಯದಂಗಡಿಗಳ ಮುಂಭಾಗ ಮಾಲೀಕರು ಹಾಗು ಸಿಬ್ಬಂದಿಗಳು ಮದ್ಯ ಪ್ರಿಯರನ್ನು ಸ್ವಾಗತಿಸಲು ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ನಾಳೆ ೪೮ ವೈನ್ ಶಾಪ್ ಹಾಗು ೩ ಎಂಎಸ್‌ಐಎಲ್ ಸೇರಿ ಒಟ್ಟು ೫೧ ಮದ್ಯದ ಮಳಿಗೆಗಳು ತೆರೆಯಲು ಸಿದ್ದತೆ ಮಾಡಿಕೊಂಡಿದ್ದಾರೆ.
ಅಲ್ಲದೆ, ಕಳೆದ ಲಾಕ್ ಡೌನ್ ನಿಂದ ಮದ್ಯ ಸಿಗದೆ ಮದ್ಯ ಪ್ರಿಯರು ಸಾಕಷ್ಟು ಪರದಾಟ ನಡೆಸಿದ್ದು ನಾಳೆ ಮದ್ಯದಂಗಡಿಗಳು ಓಪನ್ ಆಗುತ್ತಿರುವ ಹಿನ್ನೆಲೆ ಮದ್ಯದ ಖರೀದಿಗೆ ಬರುವ ಗ್ರಾಹಕರು ನೂಕುನುಗ್ಗಲು, ಘರ್ಷಣೆಗಳು ನಡೆಯದಂತೆ ಮಾಲೀಕರು ಹಾಗು ಸಿಬ್ಬಂದಿಗಳು ಬಾರ್ ಗಳ ಮುಂಭಾಗ ಮರದಿಂದ ಬ್ಯಾರಿಕೇಡ್ ನಿರ್ಮಾಣ ಮಾಡಿ ಅಂತರ ಕಾಯ್ದು ಕೊಂಡು ಮದ್ಯ ಖರೀದಿಸುವಂತೆ ಸೂಚಿಸಲಾಗಿದೆ.
ನಾಳೆ ಬೆಳಿಗ್ಗೆ ೯ ಗಂಟೆಯಿAದ ಸಂಜೆ ೭ ಗಂಟೆಯವರೆಗೆ ಮದ್ಯದಂಗಡಿಗಳು ತೆರೆಯಲು ಅನುಮತಿ ಇದ್ದು ಮದ್ಯ ಖರೀದಿಗೆ ಬಂದAತಹ ಗ್ರಾಹಕರು ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪೈಂಟ್ ಗಳ ಮೂಲಕ ಬಾಕ್ಸ್ಗಳನ್ನು ಹಾಕಿ ೬ ಅಡಿ ಅಂತರ ಕಾಯ್ದುಕೊಳ್ಳಬೇಕು. ಇನ್ನು ಮಾಸ್ಕ್ ಧರಿಸದೆ ಬಂದ್ರೆ ೧೦೦೦ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಮದ್ಯದ ಮಳಿಗೆಗಳ ಮುಂಭಾಗ ಇಲಾಖೆಯ ಕಟ್ಟುನಿಟ್ಟಿನ ನಿಯಮಗಳ ಬ್ಯಾನರ್‌ಗಳನ್ನು ಎಲ್ಲಾ ಮದ್ಯದಂಗಡಿಗಳ ಮುಂಭಾಗ ಹಾಕಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಪ್ರತಿ ಮದ್ಯದಂಗಡಿಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment