ಕೊರೊನಾ ಇಲ್ಲದಿದ್ರೆ ಡಿಕೆ ಬ್ರದರ್ಸ್ ಜೈಲು ಸೇರುತ್ತಿದ್ರು..

ಆನೇಕಲ್(ಬೆಂ.ನಗರ): ಬೆಂಗಳೂರು ಹೊರವಲಯದ ಸರ್ಜಾಪುರದ ಎಂಎಸ್‌ಪಿಸಿ ಮೇಲಿನ ದಾಳಿ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು,ಕಾAಗ್ರೆಸ್ ಹಾಗೂ ಬಿಜೆಪಿ ನಡುವಿನ ಮಾತಿನ ಸಮರ ಹಾಗೂ ಆರೋಪ-ಪ್ರತ್ಯಾರೋಪಕ್ಕೆ ನಾಂದಿ ಹಾಡಿದೆ.
ಇತ್ತೀಚಿಗಷ್ಟೆ ಕಾಂಗ್ರೆಸ್ ನಾಯಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದ ಮಹಿಳಾ ಸಪ್ಲಿಮೆಂಟರಿ ನ್ಯುರ್ಟಿಷಿಯನ್ ಪ್ರೊಡಕ್ಷನ್ ಸೆಂಟರ್‌ನಲ್ಲಿ ಅಂಗನವಾಡಿಗಳಿಗೆ ವಿತರಿಸುವ ದಿನಸಿಗೆ ಬಿಜೆಪಿ ಹಾಗು ಎಸ್.ಟಿ.ಆರ್.ಆರ್ ಪ್ರಾಧಿಕಾರದ ಅಧ್ಯಕ್ಷ ಮುನಿರಾಜು ಭಾವಚಿತ್ರ ಹಾಕಿಕೊಂಡಿದ್ದಾರೆAದು ಆರೋಪಿಸಿದ್ದರು.
ಹೀಗಾಗಿ ಇದಕ್ಕೆ ತೀರುಗೇಟು ನೀಡಿರುವ ಸಂಸದ ಎ.ನಾರಾಯಣಸ್ವಾಮಿ ಹಾಗೂ ಬಿಜೆಪಿ ಅಶ್ವಥ್ ನಾರಾಯಣಗೌಡ ಹಾಗೂ ಎಸ್.ಟಿ.ಆರ್.ಆರ್ ಪ್ರಾಧಿಕಾರದ ಅಧ್ಯಕ್ಷ ಮುನಿರಾಜು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಸರ್ಜಾಪುರದಲ್ಲಿ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದ ಈ ಮೂವರು ನಾಯಕರು, ಸಂಸದ ಡಿಕೆ ಸುರೇಶ್ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಬಲವಂತವಾಗಿ ಪ್ರಕರಣ ಸಂಬAಧ ದೂರು ದಾಖಲಿಸುವಂತೆ ಮಾಡಿದ್ದಾರೆ. ರಾಜ್ಯದಲ್ಲಿ ಡಿ.ಕೆ ಸುರೇಶ್ ಚಾರಿಟಬಲ್ ಟ್ರಸ್ಟ್ ಮೂಲಕ ಹಲವು ವಂಚನೆ ಮಾಡಿದ್ದು ರೌಡಿಗಳ ರೀತಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಜೊತೆ ವರ್ತಿಸಿದ್ದಾರೆ ಎಂದು ಕಿಡಿಕಾರಿದರು.
ಅಲ್ಲದೆ, ಡಿಕೆ ಬ್ರದರ್ಸ್ ಮೈಸೂರಿನ ಮಿನರಲ್ ಮಿಲ್ಸ್ ಅಕ್ರಮ ಮೈನಿಂಗ್ ಕೇಸ್‌ನ ಅಪರಾಧಿಗಳಾಗಿದ್ದು,ಒಂದು ವೇಳೆ ಈ ಪ್ರಕರಣದ ತೀರ್ಪು ಬಂದಿದ್ರೆ ಡಿ.ಕೆ.ಸಹೋದರರು ಜೈಲಿಗೆ ಹೋಗಬೇಕಿತ್ತೆಂದು ಬಿಜೆಪಿಯ ಅಶ್ವತ್ಥ್ ನಾರಾಯಣಗೌಡ ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಎಂಎಸ್‌ಪಿಸಿ ಬಗ್ಗೆ ಸಂಸದ ಡಿ.ಕೆ.ಸುರೇಶ್, ಉಗ್ರಪ್ಪ ಹಾಗೂ ಶಾಸಕ ಬಿ.ಶಿವಣ್ಣಗೆ ಜ್ಞಾನವೇ ಇಲ್ಲ,ಅದೊಂದು ಖಾಸಗಿ ಸಂಸ್ಥೆ ಒಮ್ಮೆ ಸರ್ಕಾರ ಇಂಟೆAಟ್ ಕೊಟ್ಟಾಗ ಸರಬರಾಜು ಮಾಡಿದ ಮೇಲೆ ಬಿಲ್ ಆಗುತ್ತೇ ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ.
ಆನೇಕಲ್ ತಾಲ್ಲೂಕಿನಲ್ಲಿ ೭೦ ಕ್ಕೂ ಹೆಚ್ಚು ಕಡೆಗಳಲ್ಲಿ ಬಿಜೆಪಿಯ ಕಾರ್ಯಕರ್ತರು ಮುಖಂಡರುಗಳು ಆಹಾರ ಹಾಗೂ ದಿನಸಿ ಕಿಟ್‌ಗಳನ್ನು ವಿತರಣೆ ಮಾಡುತ್ತಿರುವುದನ್ನು ಸಹಿಸದೆ ಈ ರೀತಿಯ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಜನರಿಗೆ ತಪ್ಪು ಸಂದೇಶ ರವಾನೆ ಮಾಡಿರುವ ಕಾಂಗ್ರೆಸ್ ನಾಯಕರು ಕ್ಷಮೆ ಕೇಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment