ಎಣ್ಣೆ ಹೊಡೆಯೋ ಮೊದ್ಲೇ ತಲೆ ಸುತ್ತಿ ಬಿದ್ದ ಯುವತಿ..

ಮದ್ಯ ಸಿಗದೇ ಕಂಗಲಾಗಿದ್ರು.. ಕ್ಯೂನಲ್ಲಿ ಯುವಕ್ರ ಜೊತೆ ಯುವತಿಯರ ಸಾಲು..
ಬೆಂಗಳೂರು: ಉಡುಪಿಯ ವಿದ್ಯಾಕಾಶಿ ಮಣಿಪಾಲ ವಿದ್ಯಾರ್ಥಿಗಳೇ ತುಂಬಿರುವ ನಗರವಾಗಿದೆ.
ಸದ್ಯ ಇಲ್ಲಿ ಮದ್ಯ ಸೇವನೆಗೆ ಗಂಡು ಹೆಣ್ಣೆಂಬ ಬೇದ ಇಲ್ಲ. ಅದರಲ್ಲೂ ವಿದ್ಯಾರ್ಥಿಗಳು ಇಲ್ಲಿನ ಪಬ್ ಬಾರ್‌ಗಳಲ್ಲಿ ಕಾಣಿಸಿಕೊಳ್ಳುವುದು ಮಾಮೂಲಾಗಿದೆ. ಇನ್ನು ಇಂದು ಮದ್ಯದಂಗಡಿ ಓಪನ್ ಆದ ಹಿನ್ನೆಲೆಯಲ್ಲಿ ಯುವತಿಯರೂ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದ್ರು..
ಇನ್ನು ಇಂದಿನಿAದ ರಾಜ್ಯದ ಬಹುತೇಕ ಭಾಗಗಳಲ್ಲಿ ಮದ್ಯದಂಗಡಿಗಳು ಪುನರಾರಂಭಗೊAಡಿದ್ದು, ಬೆಳಗ್ಗೆಯಿಂದಲೇ ಮದ್ಯದ ಅಂಗಡಿ ಮುಂದೆ ಜನತೆ ದಾಂಗುಡಿ ಇಟ್ಟಿದ್ದರು. ಬರೋಬ್ಬರಿ ೫೦ ದಿನಗಳ ಬಳಿಕ ಮದ್ಯದಂಗಡಿಗಳು ಶುರುವಾಗಿರುವುದರಿಂದ ಕೆಲವರು ನಿನ್ನೆ ರಾತ್ರಿಯಿಂದಲೇ ಮದ್ಯದ ಅಂಗಡಿಗಳ ಮುಂದೆ, ಹಾಸಿಗೆ ಹಾಸಿಕೊಂಡು ಮಲಗಿದ್ದರು ಕೂಡ ಕಂಡು ಬಂತು.
ಈ ನಡುವೆ ರಾಜ್ಯದ ಬೆಂಗಳೂರು ಸೇರಿದಂತೆ ನಾನಾ ಭಾಗಗಳಲ್ಲಿ ಯುವತಿಯರು, ಕಾಲೇಜು ವಿದ್ಯಾರ್ಥಿಗಳು, ವೃದ್ದೆಯರು ಮಹಿಳೆಯರು ಮದ್ಯ ಖರೀದಿಸಲು ಸಾಲಿನಲ್ಲಿ ಕಾಣಿಸಿಕೊಂಡರು.ಬೆಳಗ್ಗೆಯಿAದಲೇ ಬಾರ್‌ಗಳ ಮುಂದೆ ಸಾಲಿನಲ್ಲಿ ನಿಂತುಕೊAಡು ತಮ್ಮ ನೆಚ್ಚಿನ ಬ್ರಾಂಡ್‌ಗಳನ್ನು ಕೊಂಡುಕೊಳ್ಳುವುದು ಕಂಡು ಬಂತು.
ಇದೇ ವೇಳೆ ಬಾರ್‌ಗಳ ಮುಂದೆ ಯುವತಿಯರು ಕೂಡ ಎಣ್ಣೆಗಾಗಿ ಹುಡುಗರ ಜೊತೆಗೆ ಸರಿ ಸಮನಾಗಿ ಕ್ಯೂನಲ್ಲಿ ನಿಂತುಕೊAಡಿದ್ದ ದೃಶ್ಯ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಕಂಡು ಬಂದಿದೆ.
ಸದ್ಯ ಹೀಗೆ ಕ್ಯೂನಲ್ಲಿ ಮದ್ಯವನ್ನು ಕೊಂಡುಕೊಳ್ಳುವುದಕ್ಕೆ ನಿಂತುಕೊAಡಿದ್ದು ಹುಡುಗಿಯೊಬ್ಬಳು ತಲೆ ಸುತ್ತಿ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಳಿಕ ಯುವತಿಗೆ ಕುರ್ಚಿ ಹಾಕಿ ಸಮಾಧಾನ ಮಾಡಲಾಗಿದೆ ಅಂತ ತಿಳಿದು ಬಂದಿದೆ. ಕಳೆದ ಒಂದೂವರೆ ತಿಂಗಳಿನಿAದ ಎಣ್ಣೆ ಸಿಗದೇ ಕಂಗಲಾಗಿದ್ದ ಮಂದಿಗೆ ಇಂದು ಎಣ್ಣೆ ಸಿಕ್ಕಿದೆ ತಡ ಮನೆಗೆ ಓಡೋಡಿ ಹೋಗುವುದು ಕೂಡ ಕಂಡು ಬಂತು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment