ಲಾಕ್‌ಡೌನ್ ನಡುವೆ ಪ್ರೇಮಿಗಳ ಮದುವೆ..ಪೊಲೀಸ್ ಠಾಣೆ ಮೆಟ್ಟಿಲೇರಿದ ನವಜೋಡಿ..

ಹುಣಸೂರು(ಮೈಸೂರು):ಪ್ರೀತಿಸಿ ಮದುವೆಯಾದ ಜೋಡಿಯೊಂದು ಜೀವ ಭಯವಿದೆ ಎಂದು ಪೊಲೀಸ್ ಠಾಣೆ ಮೆಟ್ಟಲೇರಿರುವ ಘಟನೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.
ಅಂದ ಹಾಗೇ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಕುಣಿಕೆ ಗ್ರಾಮದ ಕೇಶವ್ ಹಾಗೂ ಅನುಷಾ ಇವರಿಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಯುವಕನ ಮನೆಯಲ್ಲಿ ಒಪ್ಪಿಗೆ ಇದ್ರೆ, ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಜೋಡಿ ರಾಮಪಟ್ಟಣ ಗ್ರಾಮದ ಮಹದೇಶ್ವರ ದೇವಸ್ಥಾನದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ಇನ್ನು ಸುದ್ದಿಗಾರರೊಂದಿಗೆ ಮಾತನಾಡಿರೋ ಈ ನವಜೋಡಿ..ಗ್ರಾಮದ ನಿವಾಸಿಗಳಾದ ಜಯರಾಮ್ ಹಾಗೂ ವಕೀಲ ಚಂದ್ರಶೇಖರ್ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಹುಣಸೂರು ಪಟ್ಟಣ ಪೊಲೀಸ್ ಠಾಣಾ ಪೊಲೀಸರಲ್ಲಿ ತಮಗೆ ರಕ್ಷಣೆ ಕೊಡಿ ಎಂದು ನವ ವಿವಾಹಿತೆ ಅನುಷಾ ಕೋರಿದ್ದಾರೆ.

ಮಾಸೀಂ ಷರೀಪ್ ಎಕ್ಸ್ ಪ್ರೆಸ್ ಟಿವಿ ಹುಣಸೂರು(ಮೈಸೂರು)

Please follow and like us:

Related posts

Leave a Comment