ವಾಣಿಜ್ಯನಗರಿಯಲ್ಲಿ ಅರಳಿದ ಕೊರೊನಾ ಹೋಲುವ ಪುಷ್ಪವೃಕ್ಷ

ಹುಬ್ಬಳ್ಳಿ:ಮಳೆರಾಯ ಭೂಮಿಗೆ ಆಗಮಿಸುತ್ತಿದ್ದಂತೆ ಗಿಡ ಮರಗಳೆಲ್ಲ ಚಿಗುರೊಡೆದು ನಿಸರ್ಗ ದೇವತೆಯನ್ನು ಅಲಂಕರಿಸುತ್ತವೆ.ಪ್ರಸ್ತುತ ದಿನಮಾನಗಳಲ್ಲಿ ಕೋರೋನಾ ವೈರಸ್ ಭೀತಿ ಎಲ್ಲೆಡೆಯೂ ಹಬ್ಬಿದ್ದು,ಕೊರೋನಾ ವೈರಸ್ ಚಿತ್ರಣವೊಂದು ಎಲ್ಲರ ಗಮನದಲ್ಲಿಯೂ ಇದೆ.ಕೋರೊನಾ ವೈರಸ್ ಚಿತ್ರಣವನ್ನು ಹೋಲುವ ಹೂವೊಂದು ವಾಣಿಜ್ಯನಗರಿಯಲ್ಲಿ ಅರಳಿದ್ದು,ಆಕರ್ಷಣಿಯವಾಗಿ ಗೋಚರಿಸುತ್ತಿದೆ.
ಮಾಧ್ಯಮಗಳಲ್ಲಿ ಕೊರೋನಾ ವೈರಸ್ ಚಿತ್ರಣವನ್ನು ನೋಡಿರುವ ಜನರಿಗೆ ಈ ಹೂವನ್ನು ನೋಡಿದಾಕ್ಷಣ ಕೆಲಕಾಲ ಅಚ್ಚರಿಯನ್ನುಂಟು ಮಾಡಿರುವುದಂತೂ ಸತ್ಯ.ಹುಬ್ಬಳ್ಳಿಯ ಅಮರನಗರದಲ್ಲಿರುವ ಮುತ್ತು ಶಾಂತಪೂರಮಠ ಅವರ ಮನೆಯ ಆವರಣದಲ್ಲಿ ಇಂತಹದೊAದು ಅಪೂರ್ವ ಪುಷ್ಪವೊಂದು ಅರಳಿದ್ದು,ಎಲ್ಲರ ಚಿತ್ರವನ್ನು ತನ್ನತ್ತ ಸೆಳೆಯುವಂತೆ ಮಾಡಿದೆ.
ಬೇಸಿಗೆಯಲ್ಲಿ ಮಾತ್ರವೇ ಅರಳುವ ಈ ಹೂವು ಪ್ರಸ್ತುತ ದಿನಮಾನಗಳಲ್ಲಿ ಕೊರೋನಾ ಹಾವಳಿಯಿಂದ ಬೇಸತ್ತಿದ್ದ ಜನರ ಕಣ್ಣಿಗೆ ಪುಷ್ಪವೂ ಕೂಡ ಕೊರೋನಾ ಚಿತ್ರಣವನ್ನು ಹೋಲುವ ಮೂಲಕ ಮುದ ನೀಡಿದೆ.
ಒಟ್ಟಿನಲ್ಲಿ ಎಲ್ಲೆಡೆಯೂ ಕೊರೋನಾ ಸುದ್ದಿಯೇ ಹಬ್ಬುತ್ತಿದ್ದು,ಇಲ್ಲಿ ನಿಸರ್ಗದಲ್ಲಿ ಸಂಪತ್ತಿನಲ್ಲಿಯೂ ಕೋರೋನಾ ವೈರಸ್ ಹೋಲುವ ಪುಷ್ಪವೊಂದು ಸಾರ್ವಜನಿಕರ ಕುತೂಹಲ ಇಮ್ಮಡಿಗೊಳಿಸುವಂತೆ ಮಾಡಿದೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment