ನಿವೇಶನ ಮಾರಿ ಬಡವರ ಕಷ್ಟಕ್ಕೆ ನೆರವಾದ ಕಾರ್ಮಿಕ..

ನಾಗಮಂಗಲ(ಮ0ಡ್ಯ):ಹಸಿವಿನ ಕಷ್ಟ, ಹಸಿವಿದ್ದವರಿಗೆ ಮಾತ್ರ ಗೊತ್ತಾಗುತ್ತದೆ.ಇದಕ್ಕೊಂದು ಸ್ಪಷ್ಟ ಉದಾಹರಣೆ ಈ ವ್ಯಕ್ತಿ..
ಅಂದ ಹಾಗೇ ಬಡತನದ ಬೇಗೆಯಲ್ಲಿ ಬಳಲಿ ಕಟ್ಟಡ ಕಾರ್ಮಿಕರಾಗಿ ಶೋಷಿತ ವರ್ಗದ ಧ್ವನಿಯಾಗಿ, ಸ್ಥಳೀಯ ವಾರ್ಡ್ನ ಕೌನ್ಸಿಲರ್ ಆಗಿ ಆಯ್ಕೆಯಾದದ್ದು ಮಾತ್ರವಲ್ಲದೆ ಪಟ್ಟಣ ಪಂಚಾಯ್ತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಈ ವ್ಯಕ್ತಿ.
ಇನ್ನು ಈ ವ್ಯಕ್ತಿ ಹೆಸರು ಮಕ್ಬೂಲ್ ಅಹಮ್ಮದ್. ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಮಂಡ್ಯ ರಸ್ತೆಯ ವಾಸಿಯಾಗಿರುವ ಮಕ್ಬೂಲ್ ಅಹಮ್ಮದ್ ಲಾಕ್ ಡೌನ್‌ನಿಂದ ಹಸಿವಿನ ಬೇಗೆ ಅನುಭವಿಸುತ್ತಿರುವ ಬಡವರಿಗೆ ನೆರವಾಗುವ ಉದ್ದೇಶದಿಂದ ತಮ್ಮ ನಿವೇಶನವನ್ನೇ ಮಾರಿ ಸಹಾಯದ ಹಸ್ತ ಚಾಚಿದ್ದಾರೆ.
ಇದಲ್ಲದೆ,ಕಟ್ಟಡ ಕಾರ್ಮಿಕನಾಗಿ ಮನೆ ಮಾತಾಗಿರುವ ಮಕ್ಬೂಲ್, ತನ್ನ ಮಕ್ಕಳಿಗೆ ವಿಭಾಗದ ಮೂಲಕ ಹಂಚಲಾಗಿದ್ದ ಆಸ್ತಿಗಳ ಪೈಕಿ ತಮ್ಮ ಜೀವನ ನಿರ್ವಹಣೆಗಾಗಿ ಉಳಿಸಿಕೊಳ್ಳಲಾಗಿದ್ದ ನಿವೇಶನವನ್ನು ೩ ಲಕ್ಷ ರೂಪಾಯಿಗಳಿಗೆ ಮಾರಾಟಮಾಡಿದ್ದಾರೆ.
ಜೊತೆಗೆ ಹಜ್ ಯಾತ್ರೆಗಾಗಿ ಇಡಲಾಗಿದ್ದ ತೆಂಗಿನ ಕಾಯಿ ಮಾರಿದ ೧ ಲಕ್ಷ ರೂಪಾಯಿಗಳು ಸೇರಿ ಒಟ್ಟು ೦೪ ಲಕ್ಷ ರೂಪಾಯಿಗಳ ದಿನಸಿ ಕಿಟ್‌ಗಳನ್ನು ಯಾವುದೇ ಜಾತಿ ಭೇದವಿಲ್ಲದೆ ಸುಮಾರು ೫೦೦ ಬಡ ಕುಟುಂಬಗಳಿಗೆ ವಿತರಣೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಕ್ಬೂಲ್ ಅಹಮ್ಮದ್, ನಾನು ಕಟ್ಟಡ ಕಾರ್ಮಿಕನಾಗಿ ಬಡತನದ ಜೊತೆ ಹಸಿವನ್ನು ಅನುಭವಿಸಿದ್ದೇನೆ. ಕೊರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್ ಡೌನ್‌ನಿಂದ ಅದೇಷ್ಟೋ ಕೂಲಿ ಕಾರ್ಮಿಕರು ಹಸಿವಿನಿಂದ ಬಳಲುತ್ತಿದ್ದಾರೆ.ಇವರಿಗೆ ಏನಾದರೂ ಸಹಾಯ ಮಾಡಬೇಕೆಂಬ ಆಲೋಚನೆಯಲ್ಲಿದ್ದ ನನಗೆ, ಇಂತಹ ಸಹಾಯದಿಂದ ೫೦ ಹಜ್ ಯಾತ್ರೆ ಮಾಡಿದಷ್ಟೆ ಪುಣ್ಯ ಲಭಿಸುತ್ತದೆ ಎನಿಸಿತು. ಇದಕ್ಕೆ ನನ್ನ ಮಕ್ಕಳು ಸಮ್ಮತಿಸಿದರು. ಆದುದರಿಂದ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ನನಗೆ ಪ್ರಚಾರ ಬೇಡ ಎಂಬ ಉದ್ದೇಶದಿಂದ ಯಾರಿಗೂ ತಿಳಿಸಿರಲಿಲ್ಲ. ದಿನಸಿ ಕಿಟ್ ವಿತರಣೆ ಸಮಯದಲ್ಲಿ ಯಾರೋ ವಿಡಿಯೋ ಮಾಡುವ ಮೂಲಕ ಎಲ್ಲರಿಗೂ ಗೊತ್ತಾಗಿದೆ. ಭಗವಂತ ಆದಷ್ಟು ಬೇಗ ಈ ಕಷ್ಟದಿಂದ ಪಾರು ಮಾಡಲಿ ಎಂದರು.

ಎಸ್.ವೆAಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ(ಮ0ಡ್ಯ)

Please follow and like us:

Related posts

Leave a Comment