ಲಾಕ್ ಡೌನ್‌ನಿಂದ ಸಾಕಷ್ಟು ಜನರಿಗೆ ತಿನ್ನಲು ಆಹಾರವಿಲ್ಲ..

ತಿಪಟೂರು(ತುಮಕೂರು):ಕೊರೊನಾ ಮಾಹಾಮಾರಿಯಿಂದ ನಿರ್ಮಾಣವಾದ ಲಾಕ್ ಡೌನ್‌ನಿಂದ ದೇಶದಲ್ಲಿ ಸಾಕಷ್ಟು ಜನರಿಗೆ ತಿನ್ನಲು ಆಹಾರವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು,ಇಂತಹ ಸಮಯದಲ್ಲಿ ನಾವು ನಮ್ಮ ನೆರೆಹೊರೆಯವರಿಗೆ ಕೈಲಾದ ಸಹಾಯ ಮಾಡುವುದು ಮಾನವ ಧರ್ಮವೆಂದು ತಿಪಟೂರು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಜನತೆಗೆ ಕರೆ ನೀಡಿದ್ದಾರೆ.
ಲಾಕ್‌ಡೌನ್‌ನಿಂದ ಆಹಾರವಿಲ್ಲದೆ ಸಂಕಷ್ಟಕ್ಕೊಳಗಾದವರಿಗೆ ದಿನಸಿ ವಿತರಿಸುವ ಸಂಬAಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್‌ನಿಂದ ಮುಖ್ಯವಾಗಿ ಆಟೋ ಚಾಲಕರು, ಟೈಲರಿಂಗ್ ವೃತ್ತಿಯವರು, ಕ್ಷೌರಿಕರು, ಪುರೋಹಿತರು ಅವರಿವರೆನ್ನದೇ ಎಲ್ಲರೂ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.ಆದರೆ ಎಲ್ಲರನ್ನು ಗುರುತಿಸಿ ಸಾಕಷ್ಟು ಜನರು ಸಹಾಯವನ್ನು ಮಾಡುತ್ತಿದ್ದು,ನಾವು ಸಹ ನಮ್ಮ ಕೈಲಾದ ಸಹಾಯವನ್ನು ಮಾಡುವ ಉದ್ದೇಶದಿಂದ ಈ ದಿನಸಿಯನ್ನು ವಿತರಿಸುತ್ತಿದ್ದೇವೆ ಎಂದರು.
ಇದುವರೆಗೂ ಯಾರಿಗೆ ಪಡಿತರ ಚೀಟಿ ಇಲ್ಲವೋ ಮತ್ತು ದಾನಿಗಳು ನೀಡುತ್ತಿರುವ ದಿನಸಿಯು ಯಾರನ್ನು ಮುಟ್ಟುತ್ತಿಲ್ಲ.ಅಂತಹವರನ್ನು ಗುರುತಿಸಿ ಸೂಕ್ತವಾಗಿ ಪಟ್ಟಿಯನ್ನು ತಯಾರಿಸಿಕೊಂಡು ೧೨೫೦ ಕುಟುಂಬಗಳಿಗೆ ದಿನಸಿ ಮತ್ತು ತರಕಾರಿಯನ್ನು ವಿತರಿಸುವ ಗುರಿಯನ್ನು ನಾವು ಮಾಡಿಕೊಂಡಿದ್ದೇವೆ.ಈ ಕಿಟ್‌ನಲ್ಲಿ ಒಂದು ಆಹಾರ ಪದಾರ್ಥಗಳ ಕಿಟ್‌ನಲ್ಲಿ ೫ ಕೆ.ಜಿ ಗೋಧಿ ಹಿಟ್ಟು, ೧ಲೀ ಅಡುಗೆ ಎಣ್ಣೆ, ೧ ಕೆ.ಜಿ ಸಕ್ಕರೆ, ೧ ಕೆ.ಜಿ ರವೆ, ೧ ಕೆ.ಜಿ ಉಪ್ಪು, ೧/೪ ಕೆ.ಜಿ ಖಾರದ ಮತ್ತು ದನಿಯಾ ಪುಡಿ, ೨ ಕೆ.ಜಿ ಈರುಳ್ಳಿ, ೧ ಬಟ್ಟೆ ಸೋಪು, ೧ಮೈ ಸೋಪು ಮತ್ತು ಈರುಳ್ಳಿ ಸೇರಿದಂತೆ ೫ ಕೆ.ಜಿ ತರಕಾರಿಯನ್ನು ಒಳಗೊಂಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್, ತಿಪಟೂರು ಸೌಹಾರ್ಧ ವೇದಿಕೆಯ ಅಲ್ಲಬಕಾಶ್, ಭಾವಸಾರ ಕ್ಷತ್ರಿಯ ಸಂಘದ ಅಧ್ಯಕ್ಷ ಮತ್ತಿತರರು ಹಾಜರಿದ್ದರು.

ಸಿ.ಎನ್.ಸಿದ್ದೇಶ್ವರ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)

Please follow and like us:

Related posts

Leave a Comment