ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು:ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ನಾಳೆಯಿಂದ ಲಾಡ್ಜ್, ಬಾರ್ ಹಾಗೂ ಕ್ಲಬ್‌ಗಳಲ್ಲಿ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ.
ಇತ್ತೀಚೆಗಷ್ಟೇ ಲಾಕ್‌ಡೌನ್ ಸಡಿಲಿಕೆಯಾದ ನಂತರ ಎಂಆರ್‌ಪಿ ಮಳಿಗೆ ಹಾಗೂ ಎಂಎಸ್‌ಐಎಲ್ ಸ್ಟಾಲ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಮದ್ಯವನ್ನು ಎಂಆರ್‌ಪಿ ಬೆಲೆಗೆ ಮಾರಾಟ ಮಾಡಬೇಕು. ಹೆಚ್ಚಿನ ಬೆಲೆಗೆ ಮಾರಿದರೆ ಲೈಸೆನ್ಸ್ ಖಾಯಂ ಆಗಿ ರದ್ದುಗೊಳಿಸಲಾಗುವುದು ಎಂದು ಅಬಕಾರಿ ಇಲಾಖೆ ಎಚ್ಚರಿಸಿದೆ.
ಈ ಕುರಿತು ಅಬಕಾರಿ ಸಚಿವ ನಾಗೇಶ್ ಸುದ್ದಿಗೋಷ್ಠಿ ನಡೆಸಿದ್ದು,ಗಡಿಭಾಗದಲ್ಲಿ ಆಧಾರ್ ಪರೀಕ್ಷಿಸಿ ಮದ್ಯ ನೀಡಲು ಸೂಚನೆ ನೀಡಿದ್ದೆ. ಲಾಕ್‌ಡೌನ್ ಬಳಿಕ ಮದ್ಯದ ಅಂಗಡಿ ಓಪನ್ ಆದ ಬಳಿಕ ಮೊದಲು ನೂಕುನುಗ್ಗಲು ಉಂಟಾಗಿತ್ತು ಎಂದರು.
ಇದೀಗ ಬಾರ್, ಕ್ಲಬ್‌ಗಳಲ್ಲಿಯೂ ಬೆಳಿಗ್ಗೆ ೯ ರಿಂದ ಸಂಜೆ ೭ ರ ವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ವರ್ಷ ಸರಕಾರಕ್ಕೆ ಅಬಕಾರಿ ಆದಾಯ ರೂ. ೨೫ ಸಾವಿರ ಕೋಟಿ ರೂ. ಬರಲಿದ್ದು, ಹೆಚ್ಚುವರಿಯಾಗಿ ೨೫೦೦ ಕೋಟಿ ರೂ. ಆದಾಯ ಬರಲಿದೆ. ಐದನೇ ದಿನಕ್ಕೆ ೧೨೨.೧೬ ಕೋಟಿ ತೆರಿಗೆ ಸಂಗ್ರಹ ಆಗಿದ್ದು, ಸರ್ಕಾರಕ್ಕೆ ಒಟ್ಟು ೭೬೭ ಕೋಟಿ ರೂ. ಆದಾಯ ಬಂದಿದೆ. ಈ ಆದಾಯ ವಾರದಲ್ಲಿ ಸಾವಿರ ಕೋಟಿ ರೂ.ಗೆ ಮುಟ್ಟುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಆನ್‌ಲೈನ್ ಮದ್ಯ ಮಾರಾಟದ ಬಗ್ಗೆಯೂ ಸಚಿವರು ಮಾಹಿತಿ ನೀಡಿದ್ದು, ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸರ್ಕಾರ ಸ್ವಾಗತಿಸುತ್ತದೆ. ಸಂದರ್ಭ ಬಂದರೆ ಆನ್‌ಲೈನ್ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment