ಖಾಸಗಿ ಆಸ್ಪತ್ರೆ ವೈದ್ಯೆ-ನಗರಸಭೆ ಪೌರಾಯುಕ್ತರ ನಡುವೇ ಸಣ್ಣ ಕೋಳಿ ಜಗಳ..!

ಸಿಂಧನೂರು(ರಾಯಚೂರು): ಕೊರೊನಾ ಟೈಂನಲ್ಲಿ ಕೆಲವು ಸಣ್ಣಪುಟ್ಟ ಕೋಳಿ ಜಗಳ ರಾಜ್ಯದಲ್ಲಿ ನಡೆಯುತ್ತವೆ.

ಸದ್ಯ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲೂ ಕೂಡ ಇದೇ ತರಹನಾದ ಕೋಳಿ ಜಗಳವೊಂದು ಖಾಸಗಿ ಆಸ್ಪತ್ರೆ ವೈದ್ಯೆ ಹಾಗೂ ನಗರಸಭೆ ಪೌರಾಯುಕ್ತರ ನಡುವೆ ನಡೆದಿದೆ.

ಅಂದ ಹಾಗೇ ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಖಾಸಗಿ ಆಸ್ಪತ್ರೆ ವೈದ್ಯೆಗೆ ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಿ ಮೂರ್ತಿ ತಿಳಿ ಹೇಳಿದ್ದರು.ಆದರೆ ಇದನ್ನೇ ದೊಡ್ಡದು ಮಾಡಿದ ಖಾಸಗಿ ಆಸ್ಪತ್ರೆ ವೈದ್ಯೆ ಶಾಸಕರಿಗೆ ನಗರಸಭೆ ಪೌರಾಯುಕ್ತರ ವಿರುದ್ಧ ದೂರು ಕೊಟ್ಟಿದ್ದಾರೆ.
ಇನ್ನು ಡಿಸಿ ಆದೇಶದ ಮೇರೆಗೆ ನಗರದಲ್ಲಿ ಸಾಮಾಜಿಕ ಅಂತರ ಕಾಪಾಡದ, ಮಾಸ್ಕ್ ಧರಿಸದ ಅಂಗಡಿ, ಹೋಟೆಲ್ ಸೇರಿದಂತೆ ನಗರದ ವಿವಿಧೆಡೆ ತೆರಳಿ ದಂಡ ವಿಧಿಸಲಾಗುತ್ತಿದೆ.

ಅದರಂತೆ ಸಿಂಧನೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾಮಾಜಿಕ ಅಂತರ ಇಲ್ಲದಿರುವುದು, ಮಾಸ್ಕ್ ಇಲ್ಲದಿರುವುದು, ಸ್ಯಾನಿಟೈಸರ್ ಬಳಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.ಇದರ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಿ ಆ ಆಸ್ಪತ್ರೆಗೆ ಭೇಟಿ ನೀಡಿದಾಗ ರೋಗಿಗಳ ಮಧ್ಯೆ ಸಾಮಾಜಿಕ ಅಂತರ ಇಲ್ಲದಿರುವುದು ಮಾಸ್ಕ್ ಧರಿಸದಿರುವು ಕಂಡು ಬಂತು.
ಕೂಡಲೇ ಆ ಆಸ್ಪತ್ರೆ ವೈದ್ಯೆಗೆ ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಿ ಅವರು ಇದರ ಬಗ್ಗೆ ಪ್ರಶ್ನಿಸಿದರು. ಆದರೆ ಇದಕ್ಕೆ ಮಾರುತ್ತರ ಕೊಟ್ಟ ವೈದ್ಯೆ ಆಸ್ಪತ್ರೆಗೆ ಬರುವ ರೋಗಿಗಳನ್ನು ಕಂಟ್ರೋಲ್ ಮಾಡಲು ನಗರಸಭೆ ಸಿಬ್ಬಂದಿಗಳನ್ನು ಕಳುಹಿಸಿಕೊಡಿ ಎಂದು ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ.

ಇದಾದ ಬಳಿಕ ಘಟನೆ ಬಗ್ಗೆ ಎಕ್ಸ್ ಪ್ರೆಸ್ ಟಿವಿ ಜೊತೆ ಮಾತನಾಡಿದ ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಿ ಮೂರ್ತಿ, ಆ ಖಾಸಗಿ ಆಸ್ಪತ್ರೆ ವೈದ್ಯೆ ನನ್ನ ವಿರುದ್ಧ ಶಾಸಕರಿಗೆ ದೂರ ನೀಡಿದ್ದಾರೆ ಎಂದು ತಿಳಿಸಿದರು.
ಅಲ್ಲದೆ, ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಹಗಲು ರಾತ್ರಿ ವೇಳೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ಸಹಕಾರ ನೀಡುವ ಬದಲಾಗಿ ದೂರು ನೀಡಿರುವುದು ವಿಷಾದ ಸಂಗತಿ ಎಂದು ತಿಳಿಸಿದರು.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment