ತಂತಿ ಮೇಲೆ ನಡಿಗೆಯಾದ ಸಿಎಂ ಸ್ಥಿತಿ….(Exclusive news)

ಆದಾಯ ಮೂಲ ಹುಡುಕಿ ಹೊರಟ ಬಿಎಸ್‌ವೈ… ಡಿಸಿಎಂಗಳು,ಸಚಿವರು ಸಕ್ರಿಯರಾಗಿಲ್ವಾ?
ಇಲಾಖೆಗಳಿಗಷ್ಟೆ ಸೀಮಿತರಾದ ಮಿನಿಸ್ಟರ‍್ಸ್.. ಸಿಎಂ ಹೆಗಲೇರಿದೆ ಕೋವಿಡ್-19 ನಿಯಂತ್ರಣ ಜವಾಬ್ದಾರಿ..!
(Exclusive news)

ಬೆಂಗಳೂರು:ರಾಜ್ಯದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿದೆಯಾ?ಈ ಆರ್ಥಿಕ ಪರಿಸ್ಥಿತಿ ನಿಭಾಯಿಸುವ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಅವರದ್ದು ಹಗ್ಗದ ಮೇಲಿನ ನಡಿಗೆಯಾಗಿದೆಯಾ?ಕೋವಿಡ್ ನಿಯಂತ್ರಣದ ಬಗ್ಗೆ ಹಾಲಿ ಇರುವ ಟಾಸ್ಕ್ಪೋರ್ಸ್ ಸಕ್ರಿಯವಾಗಿಲ್ವಾ?,ಎಲ್ಲಾ ಪರಿಸ್ಥಿತಿಯನ್ನು ಸಿಎಂ ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿಯವರೇ ನಿಭಾಯಿಸುತ್ತಿದ್ದಾರಾ?..
ಹೀಗೆ ಸಾಕಷ್ಟು ಪ್ರಶ್ನೆಗಳು ಸ್ವತಃ ಸರ್ಕಾರದ ಅಂಗಳದಿ0ದಲೇ ಕೇಳಿ ಬಂದಿವೆ.
ಅAದ ಹಾಗೇ ಕೋವಿಡ್ ನಿಯಂತ್ರಣ ಸಂಬ0ಧ ಮೊದಲಿದ್ದಷ್ಟು ಉತ್ಸಾಹ ಈಗ ಟಾಸ್ಕ್ಪೋರ್ಸ್ನಲ್ಲಿ ಕಂಡು ಬರುತ್ತಿಲ್ಲ ಎನ್ನಲಾಗಿದೆ.
ಅದರಲ್ಲೂ ಆರೋಗ್ಯ ಸಚಿವ ಬಿ.ಶ್ರೀರಾಮುಲು,ವೈದ್ಯಕೀಯ ಸಚಿವ ಸುಧಾಕರ್,ಕಂದಾಯ ಸಚಿವ ಆರ್.ಆಶೋಕ್,ಗೃಹ ಸಚಿವ ಬಸವರಾಜ್ ಬೊಮ್ಮಾಯಿ,ಡಿಸಿಎಂಗಳಾದ ಅಶ್ವಥ್ ನಾರಾಯಣ್,ಗೋವಿಂದ ಎಂ.ಕಾರಜೋಳ ಅವರುಗಳೆಲ್ಲಾ ಕೇವಲ ತಮ್ಮ ಇಲಾಖೆ ಹಾಗೂ ಅಧಿಕಾರ ವ್ಯಾಪ್ತಿಗೆ ಸೀಮಿತರಾಗಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಕೆಲ ಮೂಲಗಳು ಪ್ರಕಾರ ಸದ್ಯದ ಎಲ್ಲಾ ಪರಿಸ್ಥಿತಿಯನ್ನು ಸಿಎಂ ಯಡಿಯೂರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ನಿಭಾಯಿಸುತ್ತಿದ್ದಾರೆಂಬ ವಿಷಯ ಕೂಡ ಹೊರ ಬಿದ್ದಿದೆ.
ಇದರ ಜೊತೆ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿದೆಯಾ? ಎಂಬ ಪ್ರಶ್ನೆಗೆ ಇಲ್ಲ ಎಂಬ ಉತ್ತರವೇ ಕೇಳಿ ಬರುತ್ತಿದ್ದು,ಇದಕ್ಕಾಗಿ ಸಿಎಂ ಯಡಿಯೂರಪ್ಪ ಇದೀಗ ವಾಣಿಜ್ಯ,ಅಬಕಾರಿ ಸೇರಿದಂತೆ ಇತರೆ ತೆರಿಗೆ ಆದಾಯದತ್ತ ಮುಖ ಮಾಡಿದ್ದಾರೆ.
ಈಗಾಗಲೇ ಮದ್ಯದಂಗಡಿಗಳನ್ನು ತೆರದರೂ ಒಂದೆರೆಡು ದಿನಗಳ ಆದಾಯ ಬಿಟ್ಟಿರೇ ಹೆಚ್ಚಿನ ಹಣ ಅಬಕಾರಿ ಇಲಾಖೆಯ ಖಜಾನೆ ಸೇರಿಲ್ಲ ಎನ್ನಲಾಗುತ್ತಿದ್ದು,ಇದಕ್ಕಾಗಿಯೇ ನಿನ್ನೆಯಿಂದ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲಾಗಿದೆ.
ಇದರ ಹೊರತಾಗಿ ಸಿಎಂ ಬೇರೆ ಇಲಾಖೆಗಳಿಂದ ಯಾವ ರೀತಿ ಆದಾಯ ಮೂಲಗಳನ್ನು ಕಂಡುಕೊಳ್ಳಬಹುದು ಎಂಬುದಾಗಿ ಚಿಂತನೆ ನಡೆಸುತ್ತಿದ್ದು,ಪ್ರಸುತ್ತ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆದಾಯ ಕ್ರೂಢೀಕರಣವಾಗದಿದ್ದರೇ ಕೇಂದ್ರದತ್ತ ಮುಖ ಮಾಡಲಿದ್ದಾರೆ ಎಂದು ಕೆಲ ಉನ್ನತ ಮೂಲಗಳು ತಿಳಿಸಿವೆ.
ಬಹುಮುಖ್ಯವಾಗಿ ಶ್ರಮಿಕ ವರ್ಗಗಳಿಗೆ ಒಂದು ಹಂತದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವ ಸಿಎಂ ಯಡಿಯೂರಪ್ಪ,ಇನ್ನೊಂದು ಹಂತದಲ್ಲಿ ಅದನ್ನ ವಿಸ್ತರಣೆ ಮಾಡಿದರೇ ಅನಿವಾರ್ಯವಾಗಿ ಕೇಂದ್ರದ ನೆರವು ಬೇಕಾಗಲಿದೆ ಎಂದು ಹೇಳಲಾಗಿದೆ.
ಈಗಾಗಲೇ ಹಲವು ವರ್ಗಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದ ಸಿಎಂ,ಇದೀಗ ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯದಂತೆ ಅದನ್ನು ಇತರ ಕೆಲ ವರ್ಗಗಳಿಗೆ ವಿಸ್ತರಣೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.
ಆದರೆ ಒಟ್ಟಾರೆ ೨ ಸಾವಿರ ಕೋಟಿ ದಾಟುವ ಸಾಧ್ಯತೆ ಇರುವುದರಿಂದ ವಿಶೇಷ ಪ್ಯಾಕೇಜ್ ವಿಸ್ತರಣೆಯಲ್ಲಿ ಸಿಎಂ ಎಚ್ಚರಿಕೆ ಇಡಲು ನಿರ್ಧರಿಸಿದ್ದು,ಇದಕ್ಕಾಗಿ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ.ಅದರಲ್ಲೂ ಈ ವಿಶೇಷ ಪ್ಯಾಕೇಜ್ ವಿಸ್ತರಣೆಯಾದರೇ ಅದರ ಹೊರೆ ನೇರವಾಗಿ ಆರ್ಥಿಕ ಇಲಾಖೆ ಮೇಲೆ ಬೀಳುತ್ತದೆ.ಹೀಗಾಗಿಯೇ ಸಿಎಂ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಆದಾಯ ಹರಿವು,ಸದ್ಯದ ಹಣಕಾಸಿನ ಪರಿಸ್ಥಿತಿ ಅವಲೋಕಿಸಿ ವಿಶೇಷ ಪ್ಯಾಕೇಜ್ ವಿಸ್ತರಣೆಗೆ ಕ್ರಮ ಕೈಗೊಳ್ಳಲಿದ್ದಾರೆ.
ಇದರ ನಡುವೆ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇರುವುದರಿಂದ ಸ್ವಲ್ಪ ಮಟ್ಟಿನ ಆತಂಕ ಕೂಡ ಸರ್ಕಾರಕ್ಕೆ ಎದುರಾಗಿದ್ದರೂ ಅದನ್ನು ನಿಭಾಯಿಸಲು ಎಲ್ಲಾ ರೀತಿಯ ಸಿದ್ಧತೆಗಳು ಕೂಡ ನಡೆಯುತ್ತಿವೆ ಎಂದು ತಿಳಿದು ಬಂದಿದೆ.
ಒಟ್ಟಾರೆ ರಾಜ್ಯದ ಆರ್ಥಿಕ ಪರಿಸ್ಥಿತಿ ನಿಭಾಯಿಸುವುದು,ವಿಶೇಷ ಆರ್ಥಿಕ ಪ್ಯಾಕೇಜ್ ವಿಸ್ತರಣೆ,ಆದಾಯ ಕ್ರೂಢೀಕರಣ, ಕೋವಿಡ್-೧೯ ನಿಯಂತ್ರಣ ಹೀಗೆ ಕೆಲವು ಮಹತ್ವದ ಜವಾಬ್ದಾರಿಗಳು ಸಿಎಂ ಯಡಿಯೂರಪ್ಪ ಹೆಗಲೇರಿದ್ದು,ಸದ್ಯ ಅವರದ್ದು ಹಗ್ಗದ ಮೇಲಿನ ನಡಿಗೆಯಂತಾಗಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment