ವೈದ್ಯರಲ್ಲೇ ಆತಂಕ ಸೃಷ್ಟಿಸಿದ ಪಿ-705, 22 ಜನ ಕಿಮ್ಸ್ ಸಿಬ್ಬಂದಿಗಳು ಕ್ವಾರಂಟೈನ್

ಹುಬ್ಬಳ್ಳಿ:ಹೊಸಯಲ್ಲಾಪೂರ ಕೋಳಿಕೆರೆಯ ೩೫ ವರ್ಷದ ಕೋವಿಡ್ ಪಾಸಿಟಿವ್ ಪ್ರಕರಣದ ವ್ಯಕ್ತಿ ದೊಡ್ಡ ಅವಾಂತರವನ್ನೆ ಸೃಷ್ಟಿಸಿದ್ದು,ಕಿಮ್ಸ್ ಸಿಬ್ಬಂದಿಗಳಿಗು ಆತಂಕವನ್ನು ತಂದೊಡ್ಡಿದ್ದಾನೆ.
ಇತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಈ ಸೋಂಕು ದೃಢಪಟ್ಟಿರುವುದು ಅಚ್ಚರಿ ಮೂಡಿಸಿದೆ.ಕಳೆದ ಏ.೩೦ರಂದು ಕೆಲವು ರೋಗ ಲಕ್ಷಣಗಳುಳ್ಳ ಈ ವ್ಯಕ್ತಿ ಸಿವಿಲ್ ಆಸ್ಪತ್ರೆಯಲ್ಲಿ ಒಂದು ದಿನದ ಚಿಕಿತ್ಸೆ ಪಡೆದಿದ್ದಾನೆ.ಅಲ್ಲದೇ ಹೊಟ್ಟೆ ಹಾಗೂ ಲಿವರ್ ಸಂಬAಧಿಸಿದ ಕಾಯಿಲೆ ಹಿನ್ನಲೆಯಲ್ಲಿ ಮೇ.೦೧ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಗೆ ಮೇ.೦೭ರಂದು ಸೋಂಕು ದೃಢಪಟ್ಟಿದ್ದು,ಕಿಮ್ಸ್ ಸಿಬ್ಬಂದಿಗಳಿಗೆ ಆತಂಕವನ್ನುAಟು ಮಾಡಿದೆ.
ಸೋಂಕಿತನಿಗೆ ಪಿರಿನೋನೈಟಸ್ (ಹೊಟ್ಟೆ ಹಾಗೂ ಲಿವರ್ ಸಂಬAಧಿತ ಕಾಯಿಲೆ)ಆಪರೇಷನ್ ಮಾಡಿದ ವೈದ್ಯರಲ್ಲಿ ಆತಂಕ ಹೆಚ್ಚಾಗಿದ್ದು, ಸೋಂಕಿತನಿಗೆ ಆಪರೇಷನ್ ಮಾಡಿದ ೧೨ ಡಾಕ್ಟರ್ ಹಾಗೂ ೬ ಪಿಜಿ ವಿದ್ಯಾರ್ಥಿಗಳು ಹಾಗೂ ನಾಲ್ಕು ನರ್ಸ್ ಗಳಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಅಲ್ಲದೇ ಶಸ್ತ್ರಚಿಕಿತ್ಸೆ ಮಾಡಿದ ಶಸ್ತ್ರಚಿಕಿತ್ಸೆ ವಿಭಾಗವನ್ನು ಕೂಡ ಸಿಲ್ ಡೌನ್ ಮಾಡಲಾಗಿದೆ. ಧಾರವಾಡದ ಹೊಸ ಯಲ್ಲಾಪೂರದ ೩೫ ವರ್ಷದ ವ್ಯಾಪಾರಿಯಿಂದಲೇ ಕಿಮ್ಸ್ ಸಿಬ್ಬಂದಿಗಳಿಗೆ ಆತಂಕ ಸೃಷ್ಟಿಸಿದೆ.
ಮೇ.೦೧ರಂದು ಹೊಟ್ಟೆ ಹಾಗೂ ಲಿವರ್ ಸಂಬAಧಿಸಿದ ಕಾಯಿಲೆಯಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೋಂಕಿತ ಆಪರೇಷನ್ ನಂತರ ದೃಢಪಟ್ಟ ಕೊರೋನಾ ಸೋಂಕು ಪಟ್ಟಿದ್ದು,ಈಗ ಕಿಮ್ಸ್ ಸಿಬ್ಬಂದಿಗಳಿಗೆ ಕೋರೊನಾ ಭಯದ ವಾತಾವರಣ ನಿರ್ಮಾಣವಾಗಿದೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment