ರಸ್ತೆ ಮಧ್ಯೆದಲ್ಲೇ 1 ಗಂಟೆ ಕುಡುಕನ ಡ್ರಾಮಾ..!

ಶಿರಾ(ತುಮಕೂರು):ರಾಜ್ಯದಲ್ಲಿ ಮದ್ಯ ಮಾರಾಟವಾದಗಿನಿಂದಲೂ ಕುಡುಕರು ಕುಡಿದು ಎಲ್ಲೆಂದರಲ್ಲಿ ಬೀಳುವುದು ಆರಂಭಗೊAಡಿದೆ.
ಸದ್ಯ ಶಿರಾ ನಗರದಲ್ಲೂ ಓರ್ವ ಕುಡುಕ ಅತಿಯಾಗಿ ಕುಡಿದು ರಸ್ತೆ ಮೇಲೆ ಬಿದ್ದು ಹೊರಳಾಡಿದ್ದಾನೆ.
ಅಂದ ಹಾಗೇ ನಗರದ ಸರ್ಕಾರಿ ಆರೋಗ್ಯ ಕೇಂದ್ರದ ಎದುರಿನ ರಸ್ತೆಯಲ್ಲಿ ವ್ಯಕ್ತಿಯೊಬ್ಬ ರಸ್ತೆ ಮಧ್ಯೆದಲ್ಲೇ ಕುಳಿತು ಡ್ರಾಮಾ ಶುರುವಿಟ್ಟುಕೊಂಡಿದ್ದ.
ಅಲ್ಲದೆ, ಕುಡಿದು ಚಿತ್ ಆಗಿ ಮೇಲೇಳುವ ಶಕ್ತಿಯನ್ನೇ ಕಳೆದುಕೊಂಡಿದ್ದ ಆತನನ್ನು ಸ್ದಳಿಯರು ವಿಚಾರಿಸಿದಾಗ ನಾನು ಚಿಂತಾಮಣಿಗೆ ಹೋಗಬೇಕು ಎಂದು ಬಡಬಡಿಸಿದ್ದಾನೆ.ಇದಾದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಕರೆದುಕೊಂಡು ಹೋಗಿದ್ದಾರೆ.
ಆದರೆ ಪೊಲೀಸರು ಕರೆದುಕೊಂಡು ಹೋಗುವ ತನಕ ಸುಮಾರು ೧ ಗಂಟೆ ಕಾಲ ಜನರಿಗೆ ಪುಕ್ಕಟ್ಟೆ ಮನರಂಜನೆ ನೀಡಿದ್ದಾನೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment