ಪತ್ತೆಯಾದ ಅಪರಿಚಿತ ಮಗುವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ..

ಲಿಂಗಸೂಗೂರು(ರಾಯಚೂರು):ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆಯ ಸಿಂಡಿಕೇಟ್ ಬ್ಯಾಂಕ್ ಬಳಿ ಮೂರು ವರ್ಷದ ಅಪರಿಚಿತ ಮಗು ಪತ್ತೆಯಾಗಿದೆ.
ಸದ್ಯ ಮಾಹಿತಿ ತಿಳಿದ ಪೊಲೀಸರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಇನ್ನು ಅಪರಿಚಿತ ಮಗುವನ್ನು ಬ್ಯಾಂಕಿನ ಬಳಿ ಬಿಟ್ಟು ಹೋದ ಬಗ್ಗೆ ಮಾಹಿತಿ ಪಡೆದ ಶಿಶು ಅಭಿವೃದ್ಧಿ ಅಧಿಕಾರಿ ಲಿಂಗನಗೌಡ ಪಾಟೀಲ್ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ಮಗುವಿನ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ದಾಖಲಿಸುವಂತೆ ಮಾಹಿತಿ ನೀಡಿದರು.
ನಂತರ ಪೊಲೀಸರು ಮಗುವನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದು,ಡಾ.ಇರ್ಫಾನ್ ಚಿಕಿತ್ಸೆ ನೀಡುತ್ತಿದ್ದಾರೆ.
ಇದೇ ವೇಲೆ ಮಗುವಿನ ಪಾಲಕರನ್ನು ಪತ್ತೆ ಹಚ್ಚಿ ಎರಡು ದಿನ ಬಳಿಕ ಸಿಡಿಪಿಒ ನಿರ್ದೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವುದಾಗಿ ಲಿಂಗಸೂಗೂರು ಪಿಎಸ್‌ಐ ಪ್ರಕಾಶ ಡಂಬಳ ತಿಳಿಸಿದ್ದಾರೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Please follow and like us:

Related posts

Leave a Comment