ಗೋಡೆ ಕುಸಿದು ಇಬ್ಬರು ಕುರಿಗಾಹಿಗಳ ಸಾವು

ಬೆಳಗಾವಿ: ಮಳೆಗೆ ಗೋಡೆ ಕುಸಿದು ಇಬ್ಬರು ಕುರಿಗಾಹಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಕಮಕಾರಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕಲ್ಲಪ್ಪ ಸಾಂಬ್ರೇಕರ್ (೪೫) ಹಾಗೂ ಪರಶುರಾಮ ಪಾಟ (೧೭) ಮೃತರು.ಮೃತ ಪರಶುರಾಮ ಪಾಟಕಮಕಾರಟ್ಟಿಯ ಪರಶುರಾಮ ಪಾಟೀಲ್ ಎಂಬುವರು ಕುರಿ ಸಾಕಲು ಇಟ್ಟಿಗೆ ಹಾಗೂ ತಗಡಿನ ಶೆಡ್ ನಿರ್ಮಿಸಿದ್ದರು. ಕುರಿ ಕಾಯುತ್ತಿದ್ದಾಗ ಮಳೆ ಬಂದ ಹಿನ್ನೆಲೆಯಲ್ಲಿ ಆಶ್ರಯ ಪಡೆಯಲು ಶೆಡ್‌ಗೆ ಬಂದಿದ್ದಾರೆ.
ಈ ವೇಳೆ ಬಿರುಗಾಳಿ ಸಹಿತ ಮಳೆಗೆ ಗೋಡೆ ಕುಸಿದಿದ್ದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಿ.ಎಂ.ಪಾಟೀಲ್ ಎಕ್ಸ್ ಪ್ರೆಸ್ ಟಿವಿ ಬೆಳಗಾವಿ

Please follow and like us:

Related posts

Leave a Comment