ಮಳವಳ್ಳಿ ತಾಲ್ಲೂಕಿನಲ್ಲಿ ಚಿರತೆ ದಾಳಿಗೆ ಎರಡು ಮೇಕೆ ಬಲಿ

ಮಳವಳ್ಳಿ(ಮಂಡ್ಯ): ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ
ಹಲಗೂರು ಹೋಬಳಿಯ ದೇವೀರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೆಂಪಶೆಟ್ಟಿ ಎಂಬುವರ ಮೇಕೆಗಳೇ ಬಲಿಯಾಗಿದ್ದು,ಎಂದಿನAತೆ ತಮ್ಮ ಮನೆಯ ಹಿಂಭಾಗ ಇರುವ ಕೊಟ್ಟಿಗೆಯಲ್ಲಿ ಹಸು,ಎಮ್ಮೆ ಹಾಗೂ ಮೇಕೆಗಳನ್ನು ಕಟ್ಟಿ ಹಾಕಿದ್ದರು.ಆದರೆ ಕಳೆದ ತಡ ರಾತ್ರಿ ೧೧ ಗಂಟೆಯ ಸಮಯದಲ್ಲಿ ಚಿರತೆಯೊಂದು ದಾಳಿ ಮಾಡಿ ಸುಮಾರು ಹತ್ತು ೨೦ ಸಾವಿರ ಬೆಲೆ ಬಾಳುವ ೨ಮೇಕೆಗಳನನು ತಿಂದು ಹಾಕಿದೆ.
ಇನ್ನು ದೇವೀರಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟಲಿಂಗೇಗೌಡ ಮಾತನಾಡಿ,ಸುಮಾರು ಎರಡು ತಿಂಗಳಿAದ ನಮ್ಮ ಗ್ರಾಮದಲ್ಲಿ ಆನೆ,ಕರಡಿ, ಚಿರತೆ, ದಾಳಿ ಹೆಚ್ಚಾಗಿದ್ದು,ಜನರಲ್ಲಿ ಆತಂಕ ಮನೆ ಮಾಡಿದೆ.ಇಂದು ನಮ್ಮ ಗ್ರಾಮದ ಕೆಂಪಶೆಟ್ಟಿ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಮೇಕೆಯನ್ನು ಚಿರತೆ ತಿಂದು ಹಾಕಿದೆ.ಹೀಗಾಗಿ ಅರಣ್ಯ ಇಲಾಖೆಯವರು ಅತಿ ಶೀಘ್ರದಲ್ಲೇ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು .
ಇದೇ ವೇಳೆ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ವನಪಾಲಕ ಪ್ರಕಾಶ್, ಸಿದ್ದರಾಮು ಪೂಜಾರಿ ತಿಮ್ಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment