ಮೀತಿ ಮೀರಿದ ಹೆಗ್ಗೇರಿ ಆಸ್ಪತ್ರೆಯ ನರ್ಸ್ ದರ್ಪ,ದೌರ್ಜನ್ಯ

ಹುಬ್ಬಳ್ಳಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ಆಸ್ಪತ್ರೆಗಳ ಪಾಲು ಹೆಚ್ಚಾಗಿದೆ. ಸರ್ಕಾರಿ ವೈದ್ಯರು ಹಾಗೂ ನರ್ಸ್ಗಳು ಜೀವ ಪಣಕ್ಕಿಟು ರೋಗಿಗಳ ಉಪಚಾರ ಮಾಡುತ್ತಿದ್ದಾರೆ.ಆದ್ರೆ ಹಳೇ ಹುಬ್ಬಳ್ಳಿಯ ಹೆಗ್ಗೇರಿ ನಗರ ಆರೋಗ್ಯ ಕೇಂದ್ರದ ನರ್ಸ್ಗಳು ಮಾತ್ರ ಇದಕ್ಕೆ ಅಪವಾದ ಎಂಬAತೆ ಲಸಿಕೆ ಹಾಕಿಸಿಕೊಳ್ಳಲು ಬಂದ ಮಕ್ಕಳ ಪೋಷಕರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೆಗ್ಗೇರಿ ಆರೋಗ್ಯ ಕೇಂದ್ರದಲ್ಲಿ ಪ್ರತಿ ಗುರುವಾರ ನವಜಾತ ಶಿಶುಗಳಿಂದ ಹಿಡಿದು ೧೦ ವರ್ಷದ ಮಕ್ಕಳಿಗೆ ಓಪಿವಿ, ಬಿಸಿಜಿ, ಪೆಂಟಾ, ಐಪಿವಿ, ವಿಟಮಿನ್ ಲಸಿಕೆಯನ್ನು ಹಾಕಲಾಗುತ್ತದೆ. ಆದ್ರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಷ್ಟು ದಿನ ಮಕ್ಕಳಿಗೆ ಯಾವುದೇ ಲಸಿಕೆ ಹಾಕಿರಲಿಲ್ಲ.
ಈಗ ಲಸಿಕೆ ಹಾಕಲಾಗುತ್ತಿದ್ದು ತಾಯಂದಿರು ಪುಟ್ಟ ಪುಟ್ಟ ಮಕ್ಕನ್ನು ಹೊತ್ತುಕೊಂಡು ಆಸ್ಪತ್ರೆಗೆ ಬರುತ್ತಿದ್ದಾರೆ.
ಆದ್ರೆ ಆಸ್ಪತ್ರೆಯ ಹೊರಗಡೆ ತಾಯಂದಿರು ಶಿಶುಗಳನ್ನು ಹೊತ್ತುಕೊಂಡು ನೆಲದ ಮೇಲೆ ಕುಳಿತುಕೊಳ್ಳುವ ಸ್ಥಿತಿ ಇದೆ. ಸರಿಯಾದ ಆಸನ ವ್ಯವಸ್ಥೆ ಇಲ್ಲ. ನೆತ್ತಿ ಸುಡುವ ಬಿಸಿಲಲ್ಲಿಯೇ ತಾಯಂದಿರು ಕ್ಯೂ ನಲ್ಲಿ ನಿಲ್ಲುವ ಪರಿಸ್ಥಿತಿ ಇದೆ.
ಈ ಬಗ್ಗೆ ಪ್ರಶ್ನಿಸಿದ ತಾಯಿಯೊಬ್ಬರಿಗೆ ನರ್ಸಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ.
ಕೂಡಲೇ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಎಚ್ಚೆತ್ತುಕೊಂಡು ನರ್ಸ್ಗಳ ವರ್ತನೆಯನ್ನು ಸರಿಪಡಿಸುವ ಜೊತೆಗೆ ಮಕ್ಕಳ ಪೋಷಕರಿಗೆ ಕನಿಷ್ಟ ನೆರಳಿನ ವ್ಯವಸ್ಥೆ ಮಾಡಬೇಕಿದೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment