ಮಾಸ್ಕ್ ಧರಿಸದೆ ಓಡಾಡಿದ್ರೆ ಬೀಳುತ್ತೆ ದಂಡ..!

ಅರಕಲಗೂಡು(ಹಾಸನ):ಜಿಲ್ಲೆಯ ಅರಕಲಗೂಡು ಪಟ್ಟಣ ಪಂಚಾಯಿತಿಯು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ದಂಡ ಹಾಕಲು ಮುಂದಾಗಿದೆ.
ಅAದ ಹಾಗೇ ಈ ಬಗ್ಗೆ ಮಾತನಾಡಿರುವ ಪಟ್ಟಣ ಪಂಚಾಯಿತಿ ಆರೋಗ್ಯ ಅಧಿಕಾರಿ ಲಿಂಗರಾಜು, ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದವವರಿಗೆ ೧೦೦ ರೂ.ಗಳ ದಂಡ ವಿಧಿಸಲಾಗುತ್ತಿದೆ.ಜೊತೆಗೆ ಒಂದೇ ದಿನ ೬೦೦೦ ರೂ. ಅಲ್ಲದೇ ಸುಮಾರು ೨೦ ಸಾವಿರ ರೂ. ಅಧಿಕ ದಂಡವನ್ನು ವಿಧಿಸಲಾಗಿದೆ ಎಂದರು.
ಇನ್ನು ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಮಾಸ್ಕ್ ಸ್ಯಾನಿಟೈಸರ್‌ಗಳನ್ನು ಅಂಗಡಿಗಳಲ್ಲಿ ಇಡಬೇಕು,ಇಲ್ಲವಾದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಎ.ಎಸ್.ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು(ಹಾಸನ)

Please follow and like us:

Related posts

Leave a Comment