ಬೇಡ ಅಂದ್ರು ಅನ್ಯ ಕೋಮಿನ ಯುವತಿ ಪ್ರೀತಿಸಿ ಹೆಣವಾದ ಯುವಕ..

ಲಿಂಗಸೂಗೂರು(ರಾಯಚೂರು):ಆ ಯುವಕ ಅನ್ಯ ಧರ್ಮದ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಹೀಗಾಗಿ ಯುವತಿ ಪೋಷಕರು ಆ ಯುವಕನಿಗೆ ಬುದ್ದಿ ಹೇಳಿದ್ದರು.ಆದರೆ ಯುವಕ ಮಾತ್ರ ಆ ಯುವತಿ ಜೊತೆಗೆ ಪ್ರೀತಿಯನ್ನು ಮುಂದುವರೆಸಿದ.ಆದರೀಗ ಆ ಯುವಕ ಈಗ ಹೆಣವಾಗಿದ್ದು,ಸದ್ಯ ಯುವತಿ ಮನೆಯವರೇ ಕೊಲೆ ಮಾಡಿದ್ದಾರೆಂಬ ಆರೋಪ ಕೇಲಿ ಬಂದಿದೆ.
ಹೌದು, ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಹಳೇಪೇಟೆಯ ಪೈಗಂಬರ ನಗರದಲ್ಲಿ ಈ ಘಟನೆ ನಡೆದಿದ್ದು, ಮಹಿಬೂಬ್ ಸಾಬ್ (೨೬) ಕೊಲೆಯಾದ ಯುವಕನಾಗಿದ್ದಾನೆ.
ಅಂದ ಹಾಗೇ ಮೆಷಿನ್ ಕೆಲಸ ನಿರ್ವಹಿಸುತ್ತಿದ್ದ ಮಹಿಬೂಬ್ ಸಾಬ್ ಇನ್ನೊಂದು ಕೋಮಿನ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಆದರೆ ಯುವತಿ ಪೋಷಕರು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿ ಆ ಯುವಕನಿಗೆ ಬುದ್ಧಿಮಾತು ಹೇಳಿದ್ದರು.ಆದರೆ ಬುದ್ದಿ ಕಲಿಯದ ಮಹಿಬೂಬ್ ಸಾಬ್ ನಿನ್ನೆ ಹುಡುಗಿಯ ಮನೆ ಹತ್ತಿರ ಹೋಗಿದ್ದ.ಇದಾದ ಬಳಿಕ ಆತ ಮುದಗಲ್ ಪಟ್ಟಣದ ಹಳೇಪೇಟೆಯ ಪೈಗಂಬರ ನಗರದಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ.ಈತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ರಾಯಚೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದಲ್ಲದೆ,ಮೃತನ ಸಹೋದರ ಖಾಜಾಸಾಬ ದೂರು ನೀಡಿದ ಹಿನ್ನೆಲೆಯಲ್ಲಿ ಹನುಮಂತಪ್ಪ ಚಲವಾದಿ ಸೇರಿದಂತೆ ಹತ್ತು ಜನರ ವಿರುದ್ಧ ಮುದಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸದ್ಯ ಕೆಲವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Please follow and like us:

Related posts

Leave a Comment