ಧಾರವಾಡದಲ್ಲಿ ಮತ್ತೊಂದು ಕೊರೊನಾ ಕೇಸ್

ಧಾರವಾಡ : ಧಾರವಾಡದ ಗಾಂಧಿನಗರದ ಓಂ ನಗರದಲ್ಲಿ ಇಂದು ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈ ಹಾಗೂ ಇತರೆಡೆ ಸಂಚರಿಸಿದ ಹಿನ್ನೆಲೆ ಹೊಂದಿರುವ ೩೪ವರ್ಷದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.ಇದು ರಾಜ್ಯದ ೧೦೬೦ ನೇ ಪ್ರಕರಣವಾಗಿರುವುದರಿಂದ ಪಿ-೧೦೬೦ ಎಂದು ಗುರುತಿಸಲಾಗಿದೆ.
ಇದು ಜಿಲ್ಲೆಯ ೨೨ನೇ ಪ್ರಕರಣವಾಗಿದೆ. ಈಗಾಗಲೇ ೭ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಉಳಿದವರು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಧಾರವಾಡ

Please follow and like us:

Related posts

Leave a Comment