ಸೈಕೋ ಆದ ಗಂಡ ಹೆಂಡ್ತಿ ಕೊಂದ..ನ0ತ್ರ ತಾನೂ ಆತ್ಮಹತ್ಯೆ ಮಾಡಿಕೊಂಡ..!

ಬೆಂಗಳೂರು: ಇದು ಪಕ್ಕಾ ಸೈಕೋನೊಬ್ಬನ ಕಥೆ..ಈ ಕಥೆಯಲ್ಲಿ ತನ್ನ ಹೆಂಡ್ತಿಯನ್ನ ಕೊಂದ ಆ ಸೈಕೋ ಎರಡು ದಿನಗಳವರೆಗೆ ಹೆಣವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ.ಆದರೆ ಯಾವಾಗಾ ಸಂಬ0ಧಿಕರು ಮನೆಗೆ ಬರತೊಡಗಿದರೋ ಆಗ ಈ ಸೈಕೋ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅಷ್ಟಕ್ಕೂ ಈ ಸೈಕೋ ಹೆಸರು ಮನೀಶ್ ಕುಮಾರ್.ಬೆಂಗಳೂರಿನ ಖಾಸಗಿ ಕಂಪನಿಯೊ0ದರಲ್ಲಿ ಮ್ಯಾನೇಜರ್ ಆಗಿದ್ದ ಬಿಹಾರಿ ಮೂಲದ ಮನೀಶ್ ಕುಮಾರ್ ಸಂಧ್ಯಾ ಎಂಬಾಕೆಯನ್ನು ಮದುವೆಯಾಗಿದ್ದ.
ಎರಡು ವರ್ಷದ ಹಿಂದೆ ಬಿಹಾರದಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬಂದು ಕೂಡ್ಲು ಗೇಟ್ ಮಹಡಿಯಲ್ಲಿ ಈ ದಂಪತಿ ವಾಸವಿದ್ದರು. ಆದರೆ ಮನೀಷ್ ಕುಮಾರ್‌ಗೆ ಹುಡುಗಿಯೊಬ್ಬಳ ಪರಿಚಯವಾಗಿ ಆಕೆಯೊಂದಿಗೆ ಅಕ್ರಮ ಸಂಬ0ಧ ಬೆಳೆದಿತ್ತು. ಈ ವಿಚಾರ ಹೆಂಡತಿಗೆ ಗೊತ್ತಾಗಿ ಮನೆಯಲ್ಲಿ ಜಗಳ ಶುರುವಾಗಿತ್ತು.
ಕಳೆದ ೨ ದಿನದ ಹಿಂದೆ ಈ ಜಗಳ ತಾರಕಕ್ಕೇರಿದ್ದು ಸಂಧ್ಯಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಸೈಕೋನಂತಾಗಿದ್ದ ಮನೀಶ್ ಕುಮಾರ್,ಬಳಿಕ ಆಕೆ ಹೆಣವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ.ಈ ನಡುವೆ ಸಂಧ್ಯಾಳಿಗೆ ಆಕೆ ಸಂಬAಧಿಕರು ಫೋನ್ ಕರೆ ಮಾಡುತ್ತಿದ್ದರು.ಆದರೆ ಎರಡು ದಿನಗಳಿಂದ ಸಂದ್ಯಾ ಫೋನ್ ಕರೆ ಸ್ವೀಕರಿಸದ ಪರಿಣಾಮ ಆ ಸಂಬ0ಧಿಕರೆಲ್ಲಾ ಮನೆಗೆ ಬಂದಿದ್ದಾರೆ.ಹೀಗಾಗಿ ಸಂಬ0ಧಿಕರು ಬಂದ ಪರಿಣಾಮ ಹೆದರಿದ ಮನೀಶ್ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ವಿಷಯ ತಿಳಿದ ಪರಪ್ಪನ ಅಗ್ರಹಾರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment