ಬೈಕ್ ಕಳ್ಳನ ಬಂಧನ, ೧೮ ಬೈಕ್‌ಗಳ ವಶ

ದೇವದುರ್ಗ(ರಾಯಚೂರು):ಸುಲಭವಾಗಿ ಹಣ ಸಂಪಾದಿಸಲೆAದು ಬೈಕ್ ಕಳ್ಳತನ ರೂಢಿಸಿಕೊಂಡಿದ್ದ ಯುವಕನನ್ನು ದೇವದುರ್ಗ ಪೊಲೀಸರು ಬಂಧಿಸಿದ್ದಾರೆ.
ಸಿರವಾರ ತಾಲೂಕಿನ ಶಿವರಾಜ ಬಂಧಿತ ಬೈಕ್ ಕಳ್ಳ. ಈತ ದೇವದುರ್ಗ ಹೊಸ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ ಮೋಟಾರ್ ಬೈಕ್ ಕೀಲಿ ಮುರಿಯುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತನಿAದ ಪೊಲೀಸರು ಒಟ್ಟು ೧೮ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಬಂಧಿತ ಶಿವರಾಜನನ್ನು ವಿಚಾರಣೆಗೊಳಪಡಿಸಿದಾಗ ದೇವದುರ್ಗ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದು ಬಯಲಾಗಿದೆ. ಈ ಸಂಬAಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ದೇವದುರ್ಗ ಪಿಎಸ್‌ಐ ಎಲ್.ಬಿ. ಅಗ್ನಿ ಹಾಗೂ ಸಿಬ್ಬಂದಿಗಳಾದ ಸಂತೊಷ್, ದೇವಣ್ಣ, ಭೀಮಣ್ಣ, ರಘು, ಇಸ್ಮಾಯಿಲ್ ಭಾಗವಹಿಸಿದ್ರು..

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Please follow and like us:

Related posts

Leave a Comment