ಧಾರವಾಡದಲ್ಲಿ ತಮ್ಮನನ್ನೇ ಕೊಂದ ಅಣ್ಣಂದಿರು

ಧಾರವಾಡ:ಆಸ್ತಿ ವಿವಾದಕ್ಕಾಗಿ ನಗರದ ಕಮಲಾಪುರದಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದ್ದು,ಈ ಕೊಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಉಮೇಶ ಬಾಳಗಿಯನ್ನು ಆತನ ಸಹೋದರರಾದ ಚೆನ್ನಪ್ಪ ಬಾಳಗಿ(೨೩)ಮತ್ತು ಬಸಪ್ಪ ಬಾಳಗಿ (೨೦)ಮೊನ್ನೆ ಮಧ್ಯಾಹ್ನ ನಡು ರಸ್ತೆಯಲ್ಲೇ ಕೊಲೆ ಮಾಡಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿತ್ತು.ಹಲವು ವರ್ಷಗಳಿಂದ ಎರಡು ಕುಟುಂಬದ ನಡುವೆ ೧೩ ಗುಂಟೆ ಜಾಗದ ವಿಚಾರವಾಗಿ ಜಗಳ ನಡೆಯುತ್ತಿತ್ತು. ಈ ಸಂಘರ್ಷ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.
ಇನ್ನು ಪತಿಯನ್ನು ನನ್ನ ಎದುರೇ ಕೊಲೆ ಮಾಡಿದ್ದಾರೆ ಎಂದು ಉಮೇಶನ ಪತ್ನಿ ಉಮಾ ಏಳು ಜನರ ವಿರುದ್ಧ ದೂರು ನೀಡಿದ್ದರು.
ಆದ್ರೆ ಸಿಸಿಟಿವಿಯಲ್ಲಿ ಇಬ್ಬರು ಕೊಲೆ ಮಾಡಿದ್ದಾರೆ ಎಂಬುದು ಗೊತ್ತಾದ ಹಿನ್ನೆಲೆ ದೃಶ್ಯದಲ್ಲಿ ಕಂಡು ಬಂದ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಧಾರವಾಡ

Please follow and like us:

Related posts

Leave a Comment