ಭಾರಿ ಮಳೆಗೆ ಬಾಳೆ,ಅಡಕೆ,ತೆಂಗಿನ ತೋಟ ಸಂಪೂರ್ಣ ನಾಶ

ತಿಪಟೂರು(ತುಮಕೂರು):ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಬಾಳೆ ಅಡಕೆ ಹಾಗೂ ತೆಂಗಿನ ತೋಟ ಸಂಪೂರ್ಣ ನಾಶವಾಗಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಬಳ್ಳೇಕೆರೆ ಗ್ರಾಮದಲ್ಲಿ ನಡೆದಿದೆ.
ಅಂದÀ ಹಾಗೇ ಬಳ್ಳೇಕೆರೆ ಗ್ರಾಮದ ಬೋಜರಾಜು ಎಂಬುವರ ತೋಟದಲ್ಲಿ ಈ ಘಟನೆ ಸಂಭವಿಸಿದೆ. ಇದೇ ಸಮಯದಲ್ಲಿ ಗ್ರಾಮದ ಸುತ್ತಮುತ್ತಲಿನ ರೈತರ ಅಡಿಕೆ, ಬಾಳೆ,ತೆಂಗು, ತೋಟ ಸಂಪೂರ್ಣ ನಾಶವಾಗಿದ್ದು,ಕೈಗೆ ಬಂದ ಫಸಲು ಬಾಯಿಗೆಬರದಂತಾಗಿದೆ.
ಬಳ್ಳೇಕೆರೆ ಗ್ರಾಮದ ಬೋಜರಾಜು ವಿದ್ಯಾವಂತರು ಬಿಇ ಮೆಕ್ಯಾನಿಕಲ್ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.ಆದರೆ ಇವರಿಗೆ ಕೃಷಿಯಲ್ಲಿ ಬಹಳ ಆಸಕ್ತಿ ಅದಕ್ಕಾಗಿ ಅವರು ಹಳ್ಳಿಯ ಅವರ ತಂದೆಯ ಜಮೀನಿನಲ್ಲಿ ಕೃಷಿಕನಾಗಿ ಬದುಕುವ ಆಸೆ ಅವರದ್ದು.ಆದರೆ ರೈತರು ಬೆಳೆದಂತಹ ಬೆಳೆಗೆ ಸರಿಯಾದ ಬೆಲೆ ಸಿಗದೇ ಕಂಗಾಲಾಗಿರುವ ಸಮಯದಲ್ಲಿ ಇಂತಹ ಪ್ರಕೃತಿ ವಿಕೋಪಕ್ಕೆ ತುತ್ತಾದರೆ ರೈತರ ಬದುಕು ಎಷ್ಟು ಕಷ್ಟಕರವಾದುದು ಎಂದು ಊಹಿಸಲು ಸಾಧ್ಯವಿಲ್ಲ.
ಸದ್ಯ ಸುಮಾರು ೫ ಲಕ್ಷಕ್ಕೂ ಅಧಿಕ ಬೆಳೆ ಹಾನಿಯಾಗಿದೆ. ಜೊತೆಗೆ ಗ್ರಾಮದ ಸುತ್ತಮುತ್ತಲಿನ ರೈತರ ತೆಂಗು ಹಾಗೂ ಬಾಳೆ ತೋಟ ಸಂಪೂರ್ಣ ನಾಶವಾಗಿದೆ.ಹೀಗಾಗಿ ಸೂಕ್ತ ಪರಿಹಾರ ಕೊಡಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ರೈತರು ಮನವಿ ಮಾಡಿದರು.

ಸಿ.ಎನ್.ಸಿದ್ದೇಶ್ವರ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)

Please follow and like us:

Related posts

Leave a Comment