ಧಾರವಾಡದಲ್ಲಿ 4 ಕೊರೊನಾ ಕೇಸ್ ಪತ್ತೆ

ಧಾರವಾಡ: ಧಾರವಾಡದ ಜಿಲ್ಲೆಯಲ್ಲಿ ಇಂದು ಸಂಜೆ ನಾಲ್ಕು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.
ಪಿ-೧೯೪೨(೨೯ವರ್ಷ,ಮಹಿಳೆ),ಪಿ-೧೯೪೩(೫೮ವರ್ಷ,ಪುರುಷ),ಪಿ-೧೯೪೪(೦೨ವರ್ಷ,ಗಂಡು ಮಗು),ಪಿ-೧೯೪೫(೪೯ ವರ್ಷ, ಮಹಿಳೆ)ಇವರೆಲ್ಲರೂ ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿರುವ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.ಅಲ್ಲದೆ,ಇವರು ಜಿಲ್ಲೆಗೆ ಬಂದ ಕೂಡಲೇ ಗಂಟಲು ದ್ರವ ಪರೀಕ್ಷೆಗೊಳಪಡಿಸಿ, ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.
ಇನ್ನು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ೩೮ಕ್ಕೆ ಏರಿಕೆಯಾಗಿದೆ.ಈಗಾಗಲೇ ೧೦ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಧಾರವಾಡ

Please follow and like us:

Related posts

Leave a Comment