ಬಿಸಿಯೂಟ ಕಾರ್ಮಿಕರಿಗೆ ಸಂಪೂರ್ಣ ವೇತನ, ಪೆನ್ಷನ್ ಕೊಡಿ..

ದೇವದುರ್ಗ(ರಾಯಚೂರು): ಏಪ್ರಿಲ್ ತಿಂಗಳಿನಿAದ ಪುನಃ ಶಾಲೆಗಳು ಪ್ರಾರಂಭವಾಗುವವರೆಗೆ ಬಿಸಿಯೂಟ ಕಾರ್ಮಿಕರ ಬದುಕಿಗಾಗಿ ಸಂಪೂರ್ಣ ವೇತನ ನೀಡಬೇಕು ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ದೇವದುರ್ಗ ಗೌರವಾಧ್ಯಕ್ಷ ಗಿರಿಯಪ್ಪ ಪೂಜಾರಿ ಹೇಳಿದ್ದಾರೆ.
ಈ ಸಂಬAಧ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಬಿಸಿಯೂಟ ಕಾರ್ಮಿಕರನ್ನು ಕಾಯಂ ಮಾಡಬೇಕು ಈ ಕಾರ್ಮಿಕರು ಮತ್ತು ಅವರ ಕುಟುಂಬಗಳು ಅನಾರೋಗ್ಯಕ್ಕೆ ತುತ್ತಾದರೆ ಸರ್ಕಾರವೇ ಉಚಿತ ಆರೋಗ್ಯ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ರಾಜ್ಯ ಸರ್ಕಾರವು ಲಾಕ್ ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಹಲವಾರು ವಿಭಾಗಕ್ಕೆ ಸಹಾಯಹಸ್ತ ನೀಡಿದೆ. ಆದರೆ ಬಿಸಿಯೂಟ ಯೋಜನೆಯಲ್ಲಿ ತಿಂಗಳಿಗೆ ಕೇವಲ ೨೬೦೦ ರಿಂದ ೨೭೦೦ ರೂಪಾಯಿ ಸಂಭಾವನೆ ತೆಗೆದುಕೊಳ್ಳುವ ಈ ಕಾರ್ಮಿಕರಿಗೆ ಯಾವುದೇ ಪರಿಹಾರ ನೀಡಿಲ್ಲ.ಆದಷ್ಟು ಬೇಗನೆ ಸರ್ಕಾರ ಕಾರ್ಮಿಕರ ಕಡೆ ಗಮನ ಹರಿಸಬೇಕು ಎಂದು ಹೇಳಿದರು.

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Please follow and like us:

Related posts

Leave a Comment