ಬೆಳ್ಳಂದೂರು ಪೋಲಿಸ್ ಠಾಣೆಯಲ್ಲಿ ಜೈವಿಕ ಸೋಂಕು ನಿಯಂತ್ರಣ ಘಟಕ

ಕೆ.ಆರ್.ಪುರ(ಬೆಂ.ನಗರ):ಕೊರೊನಾ ಸೋಂಕು ಹರಡದಂತೆ ಕೊರೊನಾ ವಾರಿಯರ್ಸ್ಗಳು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಅರವಿಂದ ಲಿಂಬಾವಲಿ ತಿಳಿಸಿದ್ದಾರೆ.
ಮಹದೇವಪುರ ಕ್ಷೇತ್ರದ ಬೆಳ್ಳಂದೂರು ಪೋಲಿಸ್ ಠಾಣೆಯಲ್ಲಿ ಜೈವಿಕ ಸೋಂಕು ನಿಯಂತ್ರಣ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಕೊರೊನಾ ವಾರಿಯರ್ಸ್ಸಂಕಷ್ಟದ ಸಮಯದಲ್ಲಿ ಗಣನೀಯ ಕಾರ್ಯ ಮಾಡುತ್ತಿದ್ದು,ಅವರ ಸುರಕ್ಷತೆ ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನುಡಿದರು.
ಪೊಲೀಸರು ತಮ್ಮ ಆರೋಗ್ಯದ ಕಾಳಜಿ ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಈ ಹಿನ್ನಲೆಯಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆಗೆ ಜೈವಿಕ ಸೋಂಕು ನಿವಾರಣ ಘಟಕವನ್ನು ಕೆ.ಎನ್.ಶೇಖರ್ ರೆಡ್ಡಿ ಕೊಡುಗೆ ನೀಡಿ ಹಿತಾಸಕ್ತಿ ತೊರಿರುವುದು ಸಂತಸದ ವಿಷಯ ಎಂದು ಹೇಳಿದರು.
ಪೊಲೀಸರ ಹಿತರಕ್ಷಣೆ ಹಿನ್ನಲೆಯಲ್ಲಿ ಮಹದೇವಪುರ ಕ್ಷೇತ್ರದ ಉಳಿದ ಪೊಲೀಸ್ ಠಾಣೆಗಳಲ್ಲಿಯೂ ಇಂತಹ ಘಟಕಗಳ ಸ್ಥಾಪನೆ ಮಾಡುತ್ತೇನೆಂದು ಭರವಸೆ ನೀಡಿದರು
ಈ ವೇಳೆ ಡಿಸಿಪಿ ಅನುಚೇತ್, ಎಸಿಪಿ ಪಂಪಾಪತಿ, ಪಾಲಿಕೆ ಸದಸ್ಯೆ ಆಶಾಸುರೇಶ್, ಕ್ಷೇತ್ರ ದ ಅಧ್ಯಕ್ಷ ಮನೋಹರ್ ರೆಡ್ಡಿ, ಇನ್ಸ್ ಪೆಕ್ಟರ್ ಸೋಮಶೇಖರ್, ನಿಯಂತ್ರಣ ಘಟಕದ ದಾನಿ ಕೆ.ಎನ್. ಶೇಖರ್ ರೆಡ್ಡಿ, ಮುಖಂಡರಾದ ರಾಜಾರೆಡ್ಡಿ, ಸುನೀಲ್, ಕೈಕೊಂಡರಹಳ್ಳಿ ನವೀನ್ ಕುಮಾರ್, ಅನಿಲ್, ನಾಗೇಶ್ ಮುಂತಾದವರು ಹಾಜರಿದ್ದರು.

ಪರಿಸರ ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರ(ಬೆಂ.ನಗರ)

Please follow and like us:

Related posts

Leave a Comment