ಮಾಲೂರು ಬಳಿ ಲಾರಿ ಪಲ್ಟಿ..ಓರ್ವ ಸಾವು,7 ಮಂದಿಗೆ ಗಾಯ..

ಮಾಲೂರು (ಕೋಲಾರ): ಕೂಲಿ ಕಾರ್ಮಿಕರಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಓರ್ವ ಸಾವು ಕಂಡು ೭ ಮಂದಿ ಗಾಯಗೊಂಡ ಘಟನೆ ಮಾಲೂರು ತಾಲೂಕಿನ ಮಾಸ್ತಿ ರಸ್ತೆಯಲ್ಲಿ ನಡೆದಿದೆ.
ಕೆಂಪ(೨೬)ಸ್ಥಳದಕ್ಕೇ ಸಾವು ಕಂಡ ವ್ಯಕ್ತಿಯಾಗಿದ್ದು,ಈತ ಲಾರಿ ಕ್ಲೀನರ್ ಎಂದು ತಿಳಿದು ಬಂದಿದ್ದು, ಕೂಲಿ ಕಾರ್ಮಿಕರಾದ ರಾಜಪ್ಪ, ತಿರುಮಲಪ್ಪ ಸೇರಿ ೭ ಮಂದಿ ಗಾಯಗೊಂಡಿದ್ದು,ಅವರನೆಲ್ಲಾ ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಮಾಲೂರು ಸಮೀಪದ ಚೆನ್ನಕಲ್ ಬಳಿ ಕೂಲಿ ಕಾರ್ಮಿಕರನ್ನು ಹತ್ತಿಸಿಕೊಂಡು ಬರುತ್ತಿದ್ದ ಈ ಲಾರಿ ಪಲ್ಟಿ ಹೊಡೆದಿದೆ ಎನ್ನಲಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಮಾಲೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮಾಲೂರು (ಕೋಲಾರ)

Please follow and like us:

Related posts

Leave a Comment