ಕೋಲಾರ ನಗರಸಭೆ ಟ್ಯಾಂಕರ್ ಡ್ರೈವರ್‌ಗೆ ಹೊಡೆದ ನಗರಸಭೆ ಸದಸ್ಯೆ ಸಂಬ0ಧಿ..

ಕೋಲಾರ: ನೀರು ವಿತರಣೆ ವೇಳೆ ನಡೆದ ಜಗಳದಲ್ಲಿ ನೀರು ಪೂರೈಕೆಯ ಟ್ಯಾಂಕರ್ ಡ್ರೈವರ್‌ಗೆ ನಗರಸಭೆ ಸದಸ್ಯೆ ಪತಿಯ ಸಂಬ0ಧಿಯೆನ್ನಲಾದ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ಕೋಲಾರ ನಗರದಲ್ಲಿ ಇಂದು ನಡೆದಿದೆ.
ಶ್ರೀಧರ್,ಹಲ್ಲೆಗೊಳಗಾದ ನಗರಸಭೆಯ ನೀರು ಪೂರೈಕೆಯ ಟ್ಯಾಂಕರ್ ಡ್ರೈವರ್.ಈತ ಇಂದು ಬೆಳಿಗ್ಗೆ ೬.೩೦ರ ಸುಮಾರಿಗೆ ಕೋಲಾರ ನಗರದ ೧೫ನೇ ವಾರ್ಡ್ನ ಹಾರೋಹಳ್ಳಿಯಲ್ಲಿ ನಗರಸಭೆಯಿಂದ ನೀರು ಸರಬರಾಜು ಮಾಡುತ್ತಿದ್ದಾಗ ಇದೇ ವಾರ್ಡ್ನ ನಗರಸಭೆ ಸದಸ್ಯೆ ಪತಿಯ ಸಂಬ0ಧಿಯೆನ್ನಲಾದ ವ್ಯಕ್ತಿಯೋರ್ವ ನೀರಿನ ವಿಷಯದಲ್ಲಿ ಜಗಳ ತೆಗೆದಿದ್ದಾನ್ನಲಾಗಿದೆ.
ಇದಾದ ಬಳಿಕ ನಡೆದ ಗಲಾಟೆಯಲ್ಲಿ ಆತ ಟ್ಯಾಂಕರ್ ಡ್ರೈವರ್ ಶ್ರೀಧರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಹಲ್ಲೆಗೊಳಗಾದ ಡ್ರೈವರ್ ಶ್ರೀಧರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು,ನೀರು ಪೂರೈಕೆ ಸಂದರ್ಭದಲ್ಲಿ ಆದ ಘಟನೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.ಜೊತೆಗೆ ನಗರಸಭೆ ಆಯುಕ್ತರ ಗಮನಕ್ಕೂ ಈ ವಿಷಯ ತಂದಿದ್ದು,ತನಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾನೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಕೋಲಾರ

Please follow and like us:

Related posts

Leave a Comment