ಬಿತ್ತನೆ ಬೀಜ ವಿತರಣೆ..ಮಧ್ಯವರ್ತಿಗಳ ಹಾವಳಿ ಕಂಡು ಬಂದರೇ ಸೂಕ್ತ ಕ್ರಮ..

ಪಾವಗಡ(ತುಮಕೂರು): ರೈತರಿಗೆ ಸೇರಬೇಕಾದ ಬಿತ್ತನೆ ಬೀಜಕ್ಕೆ ಯಾವುದೇ ತೊಂದರೆ ಆಗಬಾರದು.ಈ ನಿಟ್ಟಿನಲ್ಲಿ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸಲು ಶಾಸಕ ವೆಂಕಟರಮಣಪ್ಪ ಸೂಚನೆ ನೀಡಿದ್ದಾರೆ.
ಶೇಂಗಾ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲ್ಲೂಕಿಗೆ ಒಟ್ಟು ೨೪೫೮೦ ಟನ್ ಶೇಂಗಾ ಬಿತ್ತನೆ ಬೀಜ ಬೇಡಿಕೆ ಇದ್ದು,ಈಗಾಗಲೇ ೫೮೦೦ಟನ್‌ಗಳಷ್ಟು ಬಿತ್ತನೆ ಬೀಜ ಬಂದಿದೆ.ಹೀಗಾಗಿ ಯಾವುದೇ ಕಾರಣಕ್ಕೂ ಮಧ್ಯವರ್ತಿಗಳು ಇದರಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಬೇಕು.ಒಂದು ವೇಳೆ ಮಧ್ಯವರ್ತಿಗಳ ಹಾವಳಿ ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇನ್ನು ಶೇಂಗಾ ಬಿತ್ತನೆ ಬೀಜ ವಿತರಣೆ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್.ವಿ.ವೆಂಕಟೇಶ್,ಪಾಪಣ್ಣ, ಕೋಟೆ ಪ್ರಭಾಕರ್, ತಾಲೂಕು ಪಂಚಾಯಿತಿ ಅಧ್ಯಕ್ಷ ಸೊಗಡು ವೆಂಕಟೇಶ್,ಎ.ಶAಕರ್ ರೆಡ್ಡಿ, ಉಪಾಧ್ಯಕ್ಷ ನಾಗರಾಜ್, ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ(ತುಮಕೂರು)

Please follow and like us:

Related posts

Leave a Comment