ಜೂ.೧೦ ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಪತ್ರ ಚಳವಳಿ

ಹುಬ್ಬಳ್ಳಿ:ಕೊರಚ , ಕೊರಮ, ಭಜಂತ್ರಿ, ಭೋವಿವಡ್ಡರ , ಲಂಬಾಣಿ ಜನಾಂಗದವರನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಬೇಕೆಂಬ ಹುನ್ನಾರ ಮತ್ತು ಷಡ್ಯಂತ್ರ ಮಾಡಲಾಗುತ್ತಿದ್ದು,ಇದನ್ನು ತೀವ್ರವಾಗಿ ವಿರೋಧಿಸಿ ಮೊದಲ ಹಂತವಾಗಿ ಜೂನ್ ೧೦ ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಪತ್ರ ಚಳವಳಿ ನಡೆಸಲಾಗುವುದು ಎಂದುರಾಜ್ಯ ಕೊರಮ, ಕೊರಚ, ಭೋಮಿ, ಬಂಜಾರಾ ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿಯ ಪಾಡುರಂಗ ಪಮ್ಮಾರ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು,ಜೂ.೧ ರಂದು ಕರ್ನಾಟಕ ರಾಜ್ಯದಲ್ಲಿರುವ ಕೊರಚ, ಕೊರಮ, ಭಜಂತ್ರಿ, ಭೋವಿವಡ್ಡರ, ಲಂಬಾಣಿ, ಜನಾಂಗದವರನ್ನು ಪರಿಶಿಷ್ಟ ಜಾತಿಗೆ ಆಗಿನ ಎಸ್‌ಸಿಆಯೋಗದ ಅಧ್ಯಕ್ಷ ಎಲ್.ಜಿ.ಹಾವನೂರ ವರದಿ ಮೇರೆಗೆ ೧೯೭೮ರಲ್ಲಿ ಕಾನೂನು ಬದ್ದವಾಗಿ ಸಂವಿಧಾನ ಅನುಚ್ಛೇದ ಮೇರೆಗೆ ಸೇರಿಸಿದ್ದರು.ಈ ಮೂರು ಜನಾಂಗಗಳು ಅತ್ಯಂತ ಹಿಂದುಳಿದ್ದು,ಅಲ್ಲದೇ ಶೇ.೯೦ರಷ್ಟು ಗ್ರಾಮೀಣ ಭಾಗದಲ್ಲಿದ್ದು ನೀರಿಕ್ಷರಿಗಳಾಗಿದ್ದಾರೆ.
ಇದಲ್ಲದೇ ಈ ಜನಾಂಗ ಶೈಕ್ಷಣಿಕ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದು,ಆದರೂ ಸಹಿತ ಕಳೆದ ಹತ್ತು ವರ್ಷಗಳಿಂದ ಕೆಲವರು ಈ ಜನಾಂಗಗಳನ್ನು ಎಸ್‌ಸಿ ಪಟ್ಟಿಯಿಂದ ಹೊರಗಿಡುವಂತೆ ಸದಾಶಿವ ಆಯೋಗದ ವರದಿ ಜಾರಿಗಾಗಿ ಸಾಕಷ್ಟು ಪ್ರಯತ್ನಮಾಡಲಾಗುತ್ತಿದೆ. ಅದರಂತೆ ಇದೀಗ ಕೆಲವರು ಸುಪ್ರೀಂಕೋರ್ಟ್ನಲ್ಲಿ ಮನವಿ ಸಲ್ಲಿಸಿ ಜನಾಂಗಗಳನ್ನು ಕೈಬಿಡುವಂತೆ ತಿಳಿಸಿದ್ದಾರೆ.ಆಗ ಸುಪ್ರೀಂಕೋರ್ಟ್
ಈ ಬಗ್ಗೆ ಪರಿಶೀಲನೆ ಮಾಡಿ ಇದು ಕಾನೂನಾತ್ಮಕ ವಿಷಯವಾಗಿದ್ದು,ನಿಮ್ಮ ಅಹವಾಲು ಇದ್ದರೆ ಕೇಂದ್ರ ಪರಿಶಿಷ್ಟ ಜಾತಿ ಆಯೋಗಕ್ಕೆ ಸಲ್ಲಿಸುವಂತೆ ಫೆ.೧೨ ಕ್ಕೆ ನಿರ್ದೇಶಿಸಿತು.ಅದರಂತೆ ಆಯೋಗ ಪರಿಶೀಲನೆ ಮಾಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪರಿಶೀಲನೆ ಮಾಡುವಂತೆ ತಿಳಿಸಿದ್ದಾರೆ.
ಇದೀಗ ಕಳೆದ ಹಲವಾರು ವರ್ಷಗಳಿಂದ ಪದೇ ಪದೇ ದುರುದ್ದೇಶದಿಂದ ಮಾಡುತ್ತಿರುವ ಅರ್ಜಿಯನ್ನು ಕಾರ್ಯದರ್ಶಿಗಳು ತಿರಸ್ಕರಿಸಬೇಕು. ಅಲ್ಲದೇ ಈ ಬಗ್ಗೆ ೨೦೧೩ ರಲ್ಲಿ ಕರ್ನಾಟಕ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಸಹ ಇದ್ದರು ಸಮಾಜದಲ್ಲಿ ಅನಾವಶ್ಯಕವಾಗಿ ಒಡಕು ಮಾಡುತ್ತಿರುವುದು ಖಂಡಿಸಿ ಮೊದಲ ಹಂತದಲ್ಲಿ ಪತ್ರ ಚಳುವಳಿ ಮಾಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೆಂಕಟೇಶ ಮೇಸ್ತ್ರಿ, ಬಸವರಾಜ ಅಮ್ಮಿನಭಾವಿ, ಯಮನೂರ ಗುಡಿಹಾಳ, ಬಿ.ಆರ್.ಹವೇಲಿ, ಸುಭಾಸ ಮಲ್ನಾಡ, ಮಾರುತಿ ಗೋಕಾಕ್ ಸೇರಿದಂತೆ ಮುಂತಾದವರು ಇದ್ದರು.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment