ಎಪಿಎಂಸಿ ತ್ಯಾಜ್ಯ ಸಂಗ್ರಹಕ್ಕೆ ಜಾಗದ ಕೊರತೆ..!

ಕೋಲಾರ: ಏಷ್ಯಾದಲ್ಲಿ ಅತಿದೊಡ್ಡ ಟೊಮ್ಯಾಟೊ ಮಾರುಕಟ್ಟೆ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗವೇ ಸಿಗದೆ ನಗರದ ರಸ್ತೆಗಳ ಪಕ್ಕದಲ್ಲಿ ಟೊಮ್ಯಾಟೊ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಗುತ್ತಿಗೆದಾರರಿಗೆ ವಹಿಸಲಾಗಿದ್ದು, ತ್ಯಾಜ್ಯವನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಲೇವಾರಿ ಮಾಡಬೇಕಾಗಿರುವುದು ಗುತ್ತಿಗೆ ಪಡೆದಿರುವವರ ಜವಾಬ್ದಾರಿ, ಗುತ್ತಿಗೆ ಪಡೆದವರು ತ್ಯಾಜ್ಯವನ್ನು ತಮ್ಮ ಸ್ವಂತ ಜಮೀನಿನಲ್ಲಿ ಗುಂಡಿ ತೋಡಿ ಮುಚ್ಚಬೇಕು, ಕೃಷಿಭೂಮಿ, ಕೆರೆ, ರಸ್ತೆಗಳ ಪಕ್ಕದಲ್ಲಿ ಸುರಿಯಬಾರದು ಎಂಬ ನಿಯಮದಲ್ಲಿ ಎಪಿಎಂಸಿ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಗೆ ತಿಳಿಸಿರುತ್ತದೆ. ಆದ್ರೆ ಗುತ್ತಿಗೆ ಪಡೆದವರು ನಿಯಮಗಳನ್ನು ಉಲ್ಲುಂಘಿಸಿ ಹೈವೇ ರಸ್ತೆಗಳ ಪಕ್ಕದಲ್ಲಿರುವ ಕೆರೆ ಸಮೀಪ ಹಾಗೂ ನಗರದ ರಸ್ತೆಗಳಲ್ಲಿ ಸುರಿದ ಹೋಗುತ್ತಿದ್ದಾರೆ.ಇನ್ನು ನಗರಸಭೆ ಆಧಿಕಾರಿಗಳು ಈ ಬಗ್ಗೆ ಎಪಿಎಂಸಿ ಆಡಳಿತ ಮಂಡಳಿಗೆ ಪ್ರಶ್ನಿಸಿದ್ರೆ ತ್ಯಾಜ್ಯ ಸಂಗ್ರಹಕ್ಕೆ ಸರಿಯಾದ ಜಾಗ ಇಲ್ಲ ಎಂದು ಸಬೂಬು ನೀಡಿ ಗುತ್ತಿಗೆ ಪಡೆದವರ ಕಡೆ ಕೈ ತೋರಿಸುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದ ವೇಳೆ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿಕೊಡವುದಾಗಿ ಭರವಸೆ ಮಾತ್ರ ನೀಡಿತ್ತಾ ಬಂದಿದ್ದು ಇದುವರೆಗೂ ಯಾವುದೇ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂಬುವುದು ಎಪಿಎಂಸಿ ಗುತ್ತಿಗೆದಾರರ ಆರೋಪವಾಗಿದೆ.
ಬೆಟ್ಟಪ್ಪ ಎಕ್ಸ್ ಪ್ರೆಸ್ಸ್ ಟಿವಿ ಕೋಲಾರ

Please follow and like us:

Related posts

Leave a Comment